ಕವಿತೆ ಹಸಿರು ಪೈರಿನಂತೆ : ಡಾ. ಬೇವಿನಗಿಡದ

ಧಾರವಾಡ,ಜು18 : ಕವಿತೆ ಎದೆಯ ತುಂಬಿದ ಭಾವದ ನಿರಂತರ ಹರಿವಿನಿಂದ ಹುಟ್ಟುವ ಹಸಿರು ಪೈರಿನಂತೆ ಎಂದು ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.
ಉತ್ತರ ಕರ್ನಾಟಕ ಲೇಖಕಿಯರ ಸಂಘವು ಧಾರವಾಡ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾವ್ಯ ಕಮ್ಮಟದ ಎರಡನೇಯ ದಿನದ ಗೋಷ್ಠಿಯಲ್ಲಿ ಮಾತನಾಡಿದ ಅವರು ಕವಿತೆಗೆ ಜೀವ ತುಂಬುವ ಹಾವ ಭಾವ ಅರಿತಾಗ ಅರ್ಥಪೂರ್ಣ ಕವಿತೆಗಳು ಹುಟ್ಟುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂವಾದ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಗೋಷ್ಠಿ ವೇದಿಕೆ ಮೇಲೆ ಇರುವವರಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಲೇಖಕಿ ಸಂಕಮ್ಮ ಸಂಕಣ್ಣವರ, ರಾಜಕುಮಾರ ಮಡಿವಾಳರ, ಶ್ರೀದೇವಿ ಕೆರೆಮನೆ, ನಾಗರೇಖಾ ಗಾಂವ್ಕರ, ಸಿದ್ದರಾಮ ಹಿಪ್ಪರಗಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು.