ಕವಿತೆ ಕನ್ನಡಿಗರ ಮನೆಮಾತಾಗಿರುವುದು ಹೆಮ್ಮೆಯ ಸಂಗತಿ

ಮೈಸೂರು:ಮಾ:28: ನಮ್ಮ ತಾತನ ಕವಿತೆಗಳನ್ನು ಇಂದಿನ ಪೀಳಿಗೆಯವರು ಇಷ್ಟಪಡುತ್ತಿರುವುದು ಬಹಳ ಸಂತಸದ ವಿಷಯ ಎಂದು ಪ್ರೇಮಕವಿ ಎಂದೇ ಖ್ಯಾತರಾದ ಕೆ ಎಸ್ ನರಸಿಂಹಸ್ವಾಮಿ ಅವರ ಮೊಮ್ಮಗಳು ಡಾಕ್ಟರ್ ಮೇಖಲ ವೆಂಕಟೇಶ ಹರ್ಷ ವ್ಯಕ್ತಪಡಿಸಿದರು.
ಮೈಸೂರಿನ ಜೆಎಲ್ ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಆರೋಹಣ ಸಂಸ್ಥೆ ಆಯೋಜಿಸಿದ ಕೆ ಎಸ್ ನರಸಿಂಹಸ್ವಾಮಿ ಸ್ಮರಣಾರ್ಥ ‘ಗೀತೆ ಕವಿತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ದೀಪವೂ ನಿನ್ನದೆ ಗಾಳಿಯೂ ನಿನ್ನದೆ ಕವಿತೆ ಕನ್ನಡಿಗರ ಮನೆಮಾತಾಗಿರುವುದು ಹೆಮ್ಮೆಯ ಸಂಗತಿ. ಇನ್ನೂ ಆ ಗೀತೆಯ ಗಾಯನಕ್ಕೆ ವೇದಿಕೆಯಲ್ಲಿ ಯುವತಿಯರು ನರ್ತಿಸಿದ್ದಾರೆ .’ಮೈಸೂರು ಮಲ್ಲಿಗೆ’ನಮ್ಮ ತಾತನ ಮೊದಲ ಕವನ ಸಂಕಲನ .ಇವು ಕನ್ನಡಿಗರೆಲ್ಲ ಹೃದಯ ಭಾವಗೀತೆಯಾಗಿ ಇರುವುದು ಸಂತಸದ ವಿಷಯ. ಈ ಕವನ ಸಂಕಲನ 25ಕ್ಕೂ ಹೆಚ್ಚು ಬಾರಿ ಮರುಮುದ್ರಣ ಕಂಡಿದೆ. ಕನ್ನಡದ ಕೆಲವೇ ಕೃತಿಗಳಿಗೆ ಈ ಭಾಗ್ಯ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮಾತನಾಡಿ ,ಕೆಎಸ್‍ಎನ್ ರಚಿಸಿದ ಅನೇಕ ಕವಿತೆಗಳು ಜನಪ್ರಿಯವಾಗಿರುವುದಕ್ಕೆ ಗಾಯಕರೂ ಕಾರಣ.ಆರೋಹಣ ಸಂಸ್ಥೆಯ ಕಲಾವಿದರು ಸಹ ಈ ಕವಿತೆಯನ್ನು ಎಂದು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ .ಈ ಕಾರ್ಯಕ್ರಮಕ್ಕಾಗಿಯೇ ನಾನು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದೇವೆ. ಕೆಎಸ್ ಎನ್ ರಚಿಸಿದ ಗೀತೆ ಗಳಲ್ಲಿ ಐರಾವತ, ದೀಪದ ಮಲ್ಲಿ, ಉಂಗುರ ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಸೇರಿದಂತೆ ಮುಂತಾದ ಸಂಸ್ಥೆಗಳನ್ನು ರಚಿತವಾಗಿವೆ, ಕೆಎಸ್‍ಎನ್ ಸಮಗ್ರ ಕವಿತಿಯ ‘ಮಲ್ಲಿಗೆ ಮಾಲೆ’ ಸಮಗ್ರ ಕವಿತೆಯ ಸಂಕಲನ ಬಂದಿದೆ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ದಾಂಪತ್ಯದಲ್ಲಿ ಸರಸ-ವಿರಸಗಳಿರು ವುದು ಸಹಜ. ವಿರಸಗಳನ್ನು ಬದಿಗೊತ್ತಿ ಸಂತಸದಿಂದ ಬದುಕು ಸಾಗಿಸುವುದು ಮುಖ್ಯ. ಗಂಡು-ಹೆಣ್ಣಿನ ನಡುವಿನ ಆಕರ್ಷ ಣೆಯು ದಾಂಪತ್ಯದ ಸಮರಸದಿಂದಾಗಿ ಆಧ್ಯಾತ್ಮದೆಡೆಗೆ ತಿರುಗಿ ಅರ್ಧನಾರೀಶ್ವರ ಪ್ರಜ್ಞೆ ಮೂಡಬೇಕು ಎನ್ನುವುದೇ ಕವಿಯ ಪ್ರಧಾನ ಆಶಯವಾಗಿತ್ತು. ಅವರ ಮೊದಲ ಕವನ ಸಂಕಲನ `ಮೈಸೂರು ಮಲ್ಲಿಗೆ’ ಯಲ್ಲಿ ಗ್ರಾಮ ಬದುಕಿನ ನೆಲೆಗಳಿವೆ. ಹಾಗೆಯೇ ಮಣ್ಣಿನ ವಾಸನೆಯಿದೆ. ಕನಸು ಕಾಣುವುದು ದಾಂಪತ್ಯದ ಒಂದು ಭಾಗ ಅಷ್ಟೇ. ವಾಸ್ತವದ ನೆಲೆಯಲ್ಲಿ ಬೇಂದ್ರೆ ಅವರು ಎಂದಂತೆ ಒಲವೇ ನಮ್ಮ ಬದುಕು ಎನ್ನುವುದನ್ನು ಕಾವ್ಯದಲ್ಲಿ ಮತ್ತು ಬದುಕಿ ನಲ್ಲಿ ಸಾಧಿಸಿ ತೋರಿಸಿದವರು ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು, ಭಾವನಾತ್ಮಕ ನೆಲೆಯಲ್ಲಿ ರೂಪುಗೊಂಡ ಕೆ.ಎಸ್.ನ ಅವರ ಕವನ ಸಂಕಲನದ ಮೂಲಕ ಚಿಂತನೆ ಗಳನ್ನು ನಿಷ್ಕರ್ಷೆಗೆ ಒಳಪಡಿಸಿ ಬದುಕನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ಈ ಕಾರಣ ದಿಂದಾಗಿ ಇವರ ಸಾಹಿತ್ಯ ಐತಿಹಾಸಿಕ ಮಹತ್ವವುಳ್ಳದ್ದು ಎಂದು ಹಿರಿಯ ಕವಿಗಳು ಒಪ್ಪುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಮುಖಂಡ ಎನ್. ಎಂ. ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಆರೋಹಣ ಸಂಸ್ಥೆಯ ಗೌರವಾಧ್ಯಕ್ಷ ರೂಪಾ ನಾಗೇಂದ್ರ, ಅಧ್ಯಕ್ಷ ಸುರೇಂದ್ರ ಇತರರು ಇದ್ದರು.