
ಅರಕೇರಾ,ಮಾ.೦೫- ಮುಸ್ಟೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪಿಲಿಗುಂಡ ಗ್ರಾಮದಲ್ಲಿನ ಕವಿತಾ ಹೆಚ್. ಕನ್ನಡ ಭಾಷೆ ಶಿಕ್ಷಕರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಿಂಗನೊಡಿ ರಾಯಚೂರು ಇವರು ಡಾ. ವಿ.ಬಿ ಹಿರೇಮಠಮೆಮೋರಿಯಲ್ ಪ್ರತಿಷ್ಠಾನ ರಿ ಗದಗ ಇವರ ನೀಡುವ ರಾಜ್ಯಮಟ್ಟದ ಪಂಡಿತ್ ಡಾ. ಪುಟ್ಟರಾಜ್ ಗವಾಯಿ ಸದ್ಭಾವನ ಪ್ರಶಸ್ತಿಗೆ ಭಾಜನರಾಗಿ ದಿ. ೩-೩-೨೦೨೩ ರಂದು ರಾಜ್ಯ ಮಟ್ಟದಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗದಗ ನಿವೃತಿ ಸರಕಾರಿ ನೌಕರರ ಭವನದಲ್ಲಿ ಜರುಗಿತು.
ಕಲ್ಯಾಣ ಕರ್ನಾಟಕದ ಅತ್ಯಂತ ಶೈಕ್ಷಣಿಕವಾಗಿ ಹಿಂದುಳಿದಿರುವ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಪಿಲಿಗುಂಡ ಒಂದು ಚಿಕ್ಕ ಗ್ರಾಮ ಗ್ರಾಮವು ರಾಜ್ಯಮಟ್ಟದ ಪ್ರಶಸ್ತಿಪಡೆದಿರುವದು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಇವರ ಒಂದು ಪ್ರಶಸ್ತಿಗೆ ಅರಕೇರಾ ಗ್ರಾಮದ ಶಿಕ್ಷಕಿಯಾದ ಶಕುಂತಲಾ ಸರಕಾರಿ ಪ್ರೌಢಶಾಲೆ ಕಮಲಾಪೂರ ಡಾ.ಅಮರೇಶಯಾತಗಲ್, ಸಹಾಯಕ ಪ್ರಾಧ್ಯಾಪಕರು ಹಂಪಿವಿಶ್ವವಿದ್ಯಾಲಯ, ಶಿವಣ್ಣನಾಯಕ ಪೈಕಾರ, ಲಕ್ಷ್ಮಯ್ಯನಾಐಕ ನಿವೃತ್ತಿ ತಹಶೀಲ್ದಾರರು, ಗೊವಿಂದಪ್ಪನಾಐಕ ಬುಡುಗಿ, ಹನುಮಯ್ಯನಾಯಕ, ಸಂಗೀತ ಶಿಕ್ಷಕರು, ಅಮರೇಶನಾಯಕ ಕುಪಗಲ್, ಕೆ.ಇರಬಗೇರಾ, ಹನುಮಂತ್ರಾಯನಾಯಕ, ಪೈಕಾರ ಜಿ.ವಾ.ಯು.ಅಧ್ಯಕ್ಷರು ರಾಯಚೂರು, ಗ್ರಾಮದ ಎಲ್ಲಾ ಹಿರಿಯರು, ಯುವಕರು ಸಂಬಂಧಿಕರು ಹಾಗೂ ಕುಟುಂಬದ ಎಲ್ಲಾ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.