ಕವಿತಾಳದಲ್ಲಿ ಭರ್ಜರಿ ರೋಡ್ ಶೋ

ಅಭಿವೃದ್ಧಿಗೆ ಶ್ರಮಿಸಿದ್ದೇನೆ ಮತ್ತೊಮ್ಮೆ ಅವಕಾಶ ಕಲ್ಪಿಸಿಕೊಡಿ ಶಾಸಕ ರಾಜ-ವೆಂಕಟಪ್ಪ ನಾಯಕ್
ಕವಿತಾಳ,ಮೇ.೦೧- ಈಗಾಗಲೇ ಜನರು ನನಗೆ ಮತ ನೀಡಿ ಶಾಸಕನಾಗಿ ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಅವಕಾಶ ನೀಡಿದ್ದೀರಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ ಮತ್ತೊಮ್ಮೆ ಎರಡನೇ ಬಾರಿ ಮತ ನೀಡಿ ಆಶೀರ್ವದಿಸಿ ನನ್ನನ್ನು ಶಾಸಕನಾಗಿ ಮಾಡಿದರೆ ಹೆಚ್ಚು ಹೆಚ್ಚು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಅವರು ಕೈತಳ ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ಮಾಡುವುದರ ಮೂಲಕ ಜನರಲ್ಲಿ ಮತಯಾಚನೆ ಮಾಡಿದರು
ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಜನರಿಗೆ ಮೋಸ ಮಾಡಿಲ್ಲ ಜೆಡಿಎಸ್ ಚುನಾವಣೆ ಬರವಸೆಯಂತೆ ಎಲ್ಲಾ ವರ್ಗದ ಜನರಿಗೆ ಕೆಲಸಗಳ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಎಂದು ಶಾಸಕ ರಾಜ ವೆಂಕಟಪ್ಪ ನಾಯಕ್ ಹೇಳಿದರು
ಮತ ನೀಡಿದ ಜನರಿಗೆ ಮೋಸ ಮಾಡಿಲ್ಲ ಕ್ಷೇತ್ರದ ಜನರ ಸಮಸ್ಯೆಗಳ ಕುರಿತು ಸದನದಲ್ಲಿ ಮಾತನಾಡಿ ಎಲ್ಲಾ ಸಮಾಜದವರಿಗೂ ಸಮಾನವಾಗಿ ಅನುದಾನ ತರುವ ಮೂಲಕ ಅಭಿವೃದ್ಧಿಗೆ ನೀಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ನೆರವು ನೀಡಿ ಚುನಾವಣೆ ಭರವಸೆಯಂತೆ ಮತ ನೀಡಿದ ಜನರಿಗೆ ಕೆಲಸ ಮಾಡಿದ್ದೇನೆ ಇಂದೇ ಎರಡು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಎನ್‌ಎಸ್ ಬೋಸ್ ರಾಜ್ ಹಾಗೂ ಹಂಪಯ್ಯ ನಾಯಕರವರಿಗೆ ಮತ ನೀಡಿದ್ದೀರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿಲ್ಲ ಹಂಪಯ್ಯ ನಾಯಕ್ ಶಾಸಕನಾಗಿ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಸದನದಲ್ಲಿ ಒಮ್ಮೆಯಾದರೂ ಮಾತನಾಡಲಿಲ್ಲ ಹಂಪಯ್ಯ ನಾಯಕನಿಗೆ ವಯಸ್ಸಾಗಿದೆ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವೇ ಅವರಿಗೆ ಎರಡು ಬಾರಿ ಮತ ನೀಡಿದಂತೆ ನನಗೆ ಈ ಬಾರಿ ಮತ ನೀಡಿ ಅವಕಾಶ ಮಾಡಿಕೊಡಿ ಎಂದು ಜನರ ಮುಂದೆ ಕೈಮುಗಿದು ಮತಯಾಚನೆ ಮಾಡಿದರು
ಕವಿತಾಳದಲ್ಲಿ ಸಾಕಷ್ಟು ಚರಂಡಿ ರಸ್ತೆ ನಿರ್ಮಾಣ ಡಿವೈಡ್ರೂ ಶ್ರೀ ತ್ರಿಂಬಿಕೇಶ್ವರ ದೇವಸ್ಥಾನಕ್ಕೆ ಯಾತ್ರೆ ನಿವಾಸ ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಜನರು ಕೆಲಸ ಮಾಡುವ ನಮ್ಮಂತ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ರೋಡ್ ಶೋ ಮೂಲಕ ಕವಿತಾಳ ಪಟ್ಟಣದಲ್ಲಿ ರಸ್ತೆ ರಸ್ತೆಗಳಲ್ಲಿ ಭರ್ಜರಿ ರೋಡ್ ಶೋ ಮಾಡಿ ಮತಯಾಚನೆ ಮಾಡಿದರು
ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾತನಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಏನು ಕೆಲಸ ಮಾಡಿದ್ದಾರೆ ಅವರು ಜನರಲ್ಲಿ ಮುಖ ತೋರಿಸಿಕೊಂಡು ಬರುತ್ತಾರೆ ಹಾಗೂ ಬಿಜೆಪಿ ಅಭ್ಯರ್ಥಿ ಬಿ ವಿನಾಯಕ ತಮಗೆ ನಿಲ್ಲುವ ಅವಕಾಶ ಇರುವ ದೇವದುರ್ಗ ಕ್ಷೇತ್ರವನ್ನು ಬಿಟ್ಟು ಮಾನು ಕ್ಷೇತ್ರಕ್ಕೆ ಬಂದಿರುವುದು ವಿಪರ್ಯಾಸ ಅಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಇಲ್ಲಿಗೆ ಬಂದಿದ್ದಾರೆ ಇಂಥವರನ್ನು ನೀವು ನಂಬುತ್ತೀರಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದ ವ್ಯಕ್ತಿಯನ್ನು ನಂಬಿ ಮತ್ತೊಮ್ಮೆ ಎರಡನೇ ಬಾರಿ ಮತ ನೀಡಿ ನನಗೆ ಶಿವದ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ಕವಿತಾಳ ಜನರಲ್ಲಿ ಮತಯಾಚನೆ ಮಾಡಿದರು
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಲ್ಲಿಕಾರ್ಜುನ ಬಲ್ಲಟಗಿ ಅಧ್ಯಕ್ಷರು ರವಿಕುಮಾರ್ ವಕೀಲರು ಪಾಂಡುರಂಗನಾಯಕ ವಕೀಲರು ವೀರಭದ್ರಪ್ಪ ಬಾವಿಕಟ್ಟಿ ಮಾನಪ್ಪ ವಿಶ್ವಕರ್ಮ ರಾಜ ಆದರ್ಶ ನಾಯಕ್ ಖಾಜಿ ಬಾಯ್ಸ್ ಬ್ಯಾಗವಾಟ್ ರಾಜಶೇಖರ ತಪ್ಲದಡ್ಡಿ ಹನುಮಂತರು ನಾಗರಾಜ್ ಭೋಗಾವತಿ ಮುಸ್ತಾಪ್ ಸಿಲ್ಲರ್ ಸಾಬ್ ಕಲಿಸಿ ಸಣ್ಣ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು