ಕವಿಗಳ ಪರಿಕಲ್ಪನೆ ಅನನ್ಯವಾದದ್ದು: ವಾಸುದೇವ ಹೆರಕಲ್

ಇಂಡಿ:ನ.30:ಕವಿ ಕವಿತ್ವ ಹೊಸ ಮುಖಗಳು ಸಾಹಿತ್ಯದ ಶಕ್ತಿ ಇದ್ದಂತೆ.ಅವರು ಪ್ರೌಢಮೆಗೆ ಕೃತಿಗಳು ಸಾಮಾಜಿಕ ದೃಷ್ಠಿಕೊನ ಹೊಂದಿವೆ.ಹಿಂತ ಲೇಖಕರಿಗೆ ಪೆÇ್ರೀತ್ಸಾಹ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಹೇಳಿದರು.
ಅವರು ತಾಲೂಕಿನ ತಡವಲಗಾ ಜೋಡಗುಡಿಯಲ್ಲಿ ವಿಶ್ವಚೇತನ ಸಾಂಸ್ಕøತಿಕ ಸಾಹಿತ್ಯಕ ಶೈಕ್ಷಣಿಕ ಸೇವಾ ಸಮಿತಿ,ಮರುಳಸಿದ್ದೇಶ್ವರ ದೇವಾಸ್ಥಾನ ಸಮಿತಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಇಂಡಿ ವತಿಯಿಂದ ಹಮ್ಮಿಕೊಂಡ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈರಣ್ಣ ಹುಣಸಗಿ ಅವರ ಆರಾದಿತಿ ಕವನ ಸಂಕಲನ ಹಾಗೂ ಗಂಗೂಬಾಯಿ ಗಲಗಲಿ ಅವರ ಗಗನ ಕುಸುಮ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಅಭಿನವ ರಾಚೋಟೆಶ್ವರ ಶ್ರೀಗಳು,ಶಿವಾನಂದ ಶಾಸ್ತ್ರಿಗಳು ಸಾನಿಧ್ಯ ವಹಿಸಿದ್ದರು.ಫ.ಗು.ಸಿದ್ದಾಪೂರ ಕಾರ್ಯಕ್ರಮ ಉದ್ಘಾಟಿಸಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಶಯ ನುಡಿಗಳನ್ನಾಗಿಡದರು. ರಾಜಶೇಖರ ರೂಗಿ, ತಮ್ಮಣ್ಣ ಪೂಜಾರಿ, ಬಾಬುಸಾಹುಕಾರ ಮೇತ್ರಿ, ಮಳಸಿದ್ದ ಬ್ಯಾಳಿ, ರಮೇಶ ಹೊಸಮನಿ, ಬಿ.ಎಸ್.ಇಂಡಿ, ಡಾ.ಕಾಂತು ಇಂಡಿ, ಶಿವಣ್ಣ ಚವಡಿಹಾಳ, ಅಶೋಕ ಮಿರ್ಜಿ, ಶಂಕರ ಚವ್ಹಾಣ, ಜೀತಪ್ಪ ಕಲ್ಯಾಣಿ, ಬಿ.ಎಸ್.ಪಾಟೀಲ ಇತರರು ಕಾರ್ಯಕ್ರಮದಲ್ಲಿ ಇದ್ದರು. ಬಸವರಾಜ ಗೊರನಾಳ,ಭವರಾಜ ಕಲಘಟಗಿ ನಿರೂಪಿಸಿದರು. ದತ್ತಾತ್ರೇಯ ಸುತಾರ ವಂದಿಸಿದರು.