ಕವಲಗಿಯ ಶ್ರೀಆನಂದ ಜಯಪ್ರಭುಗಳ ಆರಾಧನೆ ರದ್ದು

ವಿಜಯಪುರ, ಡಿ.29-ತಾಲೂಕಿನ ಕವಲಗಿ ಗ್ರಾಮದಲ್ಲಿ 2021 ರ ಜನೇವರಿ 3 ಮತ್ತು 4 ರಂದು ಎರಡು ದಿನಗಳ ಕಾಲ ನಡೆಯಬೇಕಿದ್ದ ಶ್ರೀ ಆನಂದ ಜಯ ಪ್ರಭುಗಳ ಆರಾಧನೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದೆ ಎಂದು ಕೋತವಾಲ ಪರಿವಾರದವರು ತಿಳಿಸಿದ್ದಾರೆ.
ಕೋರೊನಾ ಎರಡನೆ ಅಲೆ ಮತ್ತೇ ಆರಂಭವಾಗಿರುವದರಿಂದ ಅಲ್ಲದೇ ಆರಾಧನೆಯ ಪ್ರಯುಕ್ತ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರುವದರಿಂದ ಮುಂಜಾಗರೂಕತಾ ಕ್ರಮವಾಗಿ ಆರಾಧನೆ ಉತ್ಸವವನ್ನು ಮತ್ತು ಊಟ ಪ್ರಸಾದವನ್ನು ರದ್ದುಗೊಳಿಸಲಾಗಿದೆ.
ಆದ್ದರಿಂದ ಆರಾಧನೆ ಉತ್ಸವವಕ್ಕೆ ಆಗಮಿಸುವ ಭಕ್ತಾದಿಗಳು ಸಹಕರಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಕೋರಿರುವರು.