ಕವಲಗಾ(ಬಿ): 51ನೇ ಸಂಸ್ಥಾಪನಾ ದಿನಾಚರಣೆ

ಕಲಬುರಗಿ,ಮೇ.30- ಕವಲಗಾ ಬಿ ಗ್ರಾಮ ಪಂಚಾಯತಿಯಲ್ಲಿ ಸೆಂಟರ್ ಆಫ ಇಂಡಿಯನ್ ಟ್ರೇಡ್ ಯೂನಿಯನ್‍ನ 51ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಕಾರ್ಮಿಕ ಕರ್ನಾಟಕ ಯೂಟ್ಯೂಬ್ ಚಾನೆಲ್ ಉದ್ಘಾಟನೆಯನ್ನು ಆನ್ಲೈನ್ ಮೂಲಕ ವೀಕ್ಷಣೆ ಮಾಡಲಾಯಿತು.
ಸಿಐಟಿಯೂ ರಾಜ್ಯ ಸಮಿತಿ ಸದಸ್ಯರಾದ ಶಿವಾನಂದ ಕವಲಗಾ ಬಿ ಧ್ವಜಾರೋಹಣ ಮಾಡಿದರು. ದೇವಿಂದ್ರ ಮಿಜೇಜಿ,ಗುರುಸಿದ್ದಯ್ಯ ಸ್ವಾಮಿ, ಮಲಕಮ್ಮ ಗೂಳೂರ, ಇಂದ್ರಾಬಾಯಿ ನಾಟೀಕಾರ, ತಾರಾಬಾಯಿ ಪೂಜಾರಿ,ಕನ್ಯಾಕುಮಾರಿ ಚಿನಮಳ್ಳಿ,ಮಹೇಶ್ವರಿ ಚಿನಮಳ್ಳಿ ಭಾಗವಹಿಸಿ ಸಂಸ್ಥಾಪನಾ ದಿನಾಚರಣೆ ಆಚರಿಲಾಯಿತು.