ರಾಯಚೂರು,ಜು.೩೧-
ಮಾನವ ಕಳ್ಳ ಸಾಗಾಣಿ ತಡೆ ದಿನಾಚರಣೆ ಮೊರಾರ್ಜಿ ವಸತಿ ಶಾಲೆ ಆಶಾಪೂರ ರಸ್ತೆ, ರಾಯಚೂರುನಲ್ಲಿ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು-ನೆರವು ಜಾಗ್ರತಿ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಗೌರವಾನ್ವಿತ ಸನ್ಮನ್ಯಾ ಶ್ರೀ ದಯಾನಂದ್ ಬೆಲೂರೆ ದಿವಾಣಿ ನ್ಯಾಯಾಧೀಶರು (ಹಿ.ಶ್ರೇ) ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರುರವರು ಉದ್ಘಾಟಿಸಿ ಪ್ರತಿಜ್ಞೆಯನ್ನು ಬೋದಿಸಿದರು. ನಂತರ ಮಾನವ ಕಳ್ಳ ಸಾಗಣಿ ಕುರಿತು ತಿಳಿಸಿ, ಇದಕ್ಕೆ ಬಲಿಯಾಗುತ್ತಿರುವ ಕಾರಣಗಳನ್ನು ವಿವರಿಸಿ, ಮಕ್ಕಳು ಇಂತಹ ಜಾಲಗಳಿಗೆ ಬಲಿಯಾಗದೆ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಜಾಗೃತರಾಗಿರಲು ತಿಳಿಸಿದರು. ಮಾನವ ಕಳ್ಳ ಸಾಗಾಣಿಕೆ ಎಲ್ಲಿಯಾದರೂ ಕಂಡಿ ಬಂದಲ್ಲಿ ತಕ್ಷಣವೇ ೧೧೨ ಅಥವಾ, ೧೦೯೮ ಮುಂತಾದ ಉಚಿತ ಸಹಾಯವಾಣಿಗಳ ಸಹಾಯ ಪಡೆಯಲು ತಿಳಿಸಿದರು.
ಅತಿಥಿಯಾಗಿ ಅಭಿಷೆಕ್ ಕುಮಾರ್ IPಈ (ಖPಈ) ರೈಲ್ವೇ ಇಲಾಖೆ ರಾಯಚೂರು ರವರು ರೈಲ್ವೇ ಸಹಾಯವಾಣಿ ೧೩೯ ಕುರಿತು ತಿಳಿಸಿದರು. ಮಾನವ ಸಂಪನ್ಮೂಲದ ದುರ್ಬಳಕೆಯ ಕುರಿತು ಮಾಹಿತಿ ನೀಡಿದರು.
ಮನ್ಸೂರ್ ಅಹ್ಮದ್ ಜಿ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಇವರು ಮಾನವ ಕಳ್ಳ ಸಾಗಣಿ ಎಂದರೆ ಎಲ್ಲ ಮನುಷ್ಯ ಜೀವಿಗಳು, ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಎಂದು ತಿಳಿಸಿ, ಇದಕ್ಕೆ ವಿವಿಧ ಕಾರಣಗಳಿಗೆ ಆಗುತ್ತಿರುವುದು ಕಳವಳಕಾರಿ ಸಂಗತಿ, ಇದನ್ನು ತಡೆಗಟ್ಟಲು ಎಲ್ಲರೂ ಹೋರಾಡಬೇಕಾಗಿದೆಂದರು.
ಡಾ. ದಂಡಪ್ಪ ಬಿರಾದಾರ ಕಂದ ಕಲಾ ಶಿಕ್ಷಕರು ಸರ್ಕಾರಿ ಪ್ರೌಡಶಾಲೆ ಉಡಮಗಲ್ ಖಾನಾಪೂರು ಹಾಗೂ ಜಿಲ್ಲಾ ಸಂಚಾಲಕರು ರೆಡ್‌ಕ್ರಾಸ್ ಸಂಸ್ಥೆ ರಾಯಚೂರುರವರು ನಮ್ಮ ದೇಶದಲ್ಲಿ ಪ್ರತೀ ವರ್ಷ ಹಲವಾರು ಕಾರಣಗಳಿಂದ ಮಾನವ ಕಳ್ಳ ಸಾಗಣಿ ಆಗುತ್ತಿದೆ. ಇದರಿಂದ ಜಾಗೃತರಾಗಿರಬೇಕು. ಅಪರಿಚಿತರು ಏನಾದರೂ ತಿನ್ನುವ ವಸ್ತುಗಳು ಕೊಟ್ಟರೆ ತಗೊಳ್ಳದೆ, ಇದರ ವಿರುದ್ದ ನೆರೆ ಹೊರೆಯಲ್ಲಿ ತಿಳಿಸಿ, ಗೆಳೆಯರಲ್ಲಿಯೂ ಅಲರ್ಟ ಆಗಿರುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಪನಾ ಎಸ್.ಬಿರಾದಾರ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ರಾಯಚೂರು ರವರು ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಮಕ್ಕಳು ಶಿಸ್ತಿನ ಜೀವನ ನಡೆಸಿ, ಉನ್ನತ ವ್ಯಾಸಂಗ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ತಿಳಿಸಿದರು.
ವೇದಿಕೆ ಮೇಲೆ ಸಿ.ನರಸಿಂಹ ಮೂರ್ತಿ ಂSI. (ಖPಈ) ರೈಲ್ವೇ ಇಲಾಖೆ, ವೆಂಕಟೇಶ ವೈ.ಎನ್, ಹುಲಿಗೆಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾತಿಗಳಾದ ಹನುಮೇಶ, ಕಿರಲಿಂಗಪ್ಪ, ಶಿವರಾಜ, ತಿಕ್ಕಯ್ಯ, ಖಾಜಾಬೀ, ರಮೇಶ್, ವಿಶಾಲಕ್ಷ್ಮೀ, ನರಸೊಂಹ ಜಿ.ಬಿ., ಈರಮ್ಮ, ದಿನೇಶಕಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವು ಮಕ್ಕಳ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಶಿವರಾಜ ಸ್ವಾಗತಿಸಿದರು. ಕಾರ್ಯಕ್ರಮವನ್ನು ತಿಕ್ಕಯ್ಯ ನಿರೂಪಿಸಿದರು.ಕೊನೆಯಲ್ಲಿ ಹನುಮೇಶ ವಂದಿಸಿದರು. ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.