ಕಳ್ಳಿಯ ಬಂಧನ: 1.96 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಜಪ್ತಿ

ಕಲಬುರಗಿ:ಡಿ.08:ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಶೋಕ್ ನಗರ ಠಾಣೆಯ ಪೋಲಿಸರು ಕಳ್ಳಿಯೊಬ್ಬಳಿಗೆ ಬಂಧಿಸಿ, ಆಕೆಯಿಂದ ಸುಮಾರು 1.96 ಲಕ್ಷ ರೂ.ಗಳ ಮೌಲ್ಯದ 31 ಗ್ರಾಮ್ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮಹಿಳೆಯನ್ನು ಬಾಪುನಗರದ ಕುಮಾರಿ ಏಕತಾ ತಂದೆ ಕೈಲಾಶ್ ಉಪಾಧ್ಯಾಯ (24) ಎಂದು ಗುರುತಿಸಲಾಗಿದೆ. ದಕ್ಷಿಣ ಉಪ ವಿಭಾಗದ ಸಹಾಯಕ ಪೋಲಿಸ್ ಆಯುಕ್ತ ಭೂತೇಗೌಡ ಅವರ ನೇತೃತ್ವದಲ್ಲಿ ಪಿಐ ಅರುಣಕುಮಾರ್, ಸಿಬ್ಬಂದಿಗಳಾದ ಶಿವಶರಣಪ್ಪ, ವೈಜನಾಥ್, ಮಲ್ಲಿಕಾರ್ಜುನ್, ಶಿವಲಿಂಗ್, ನೀಲಕಂಠ್, ಹರಿಕಿಶೋರ್, ಚಂದ್ರಶೇಖರ್, ಶ್ರೀಮತಿ ಜ್ಯೋತಿ, ಸಾವಿತ್ರಿ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿ ಯುವತಿಯನ್ನು ಬಂಧಿಸಿದ್ದಾರೆ. ಪೋಲಿಸರ ಕಾರ್ಯಾಚರಣೆಯನ್ನು ನಗರ ಪೋಲಿಸ್ ಆಯುಕ್ತ ಆರ್. ಚೇತನಕುಮಾರ್ ಅವರು ಶ್ಲಾಘಿಸಿದ್ದಾರೆ.