ಕಳ್ಳಸಂತೆಗೆ ಪಡಿತರ ಆಹಾರ ಧಾನ್ಯ: ಸಿದ್ದಪ್ಪ ಸಿನ್ನೂರ ಆರೋಪ

ಅಫಜಲಪುರ:ಮಾ.20: ಆಹಾರ ನಾಗರೀಕ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆಯ ಕಣ್ಣೆದುರನಲ್ಲಿಯೇ ಬಡವರಿಗೆ ಸಿಗುವ ಆಹಾರ ಧಾನ್ಯದಲ್ಲಿ ಕಳ್ಳತನವಾಗುತ್ತಿದ್ದರು ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದು ಸಮಾಜ ಸೇವಕ ಸಿದ್ದಪ್ಪ ಸಿನ್ನೂರ ಅವರು ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ಈ ಹಿಂದೆ ಈ ಇಲಾಖೆಗಳಲ್ಲಿ ನಡೆದ ಅವ್ಯವಹಾರ ಗಮನಿಸಿದ ಸರಕಾರ ಕಂಪ್ಯೂಟರ ಮೂಲಕ ಥಂಭ್ ಇಂಪ್ರೇಶನ್ ಅಳವಡಿಸಿ ಪಡಿತರ ಆಹಾರ ಧಾನ್ಯ ವಿತರಿಸುವ ಪದ್ಧತಿ ಜಾರಿಗೆ ತಂದಿದೆ, ಆದರೂ ಆನೆ ನಡೆದಿದ್ದೆ ದಾರಿ ಎನ್ನುವಂತೆ ಈ ಇಲಾಖೆಯಲ್ಲಿ ಕಳ್ಳತನ ಮಾತ್ರ ನಿಂತಿಲ್ಲ ಎಂದು ಆರೋಪ ಮಾಡಿದ ಅವರು ನಾಳೆ ಸರ್ವರ ಡೌನ್ ಆಗುತ್ತದೆ ಎಂದು ಸುಳ್ಳು ಹೇಳಿ ಪಡಿತರದಾರರಿಂದ ಅಡವಾನ್ಸ್ ಥಂಭ್ ಪಡೆದುಕೊಂಡು ಮರುದಿನ ಡೀಲರಗಳು ತಮ್ಮ ಅಂಗಡಿಗಳು ಬಂದ್ ಮಾಡುತ್ತಾರೆ. ತದ ನಂತರ ಹಾಗೆ ಸುಳ್ಳು ಹೇಳುತ್ತ ದಿನ ದೂಡುತ ಬಂದ ಆಹಾರ ದಾನ್ಯವನ್ನು ಪುನ ಬೇರೆ ಚೀಲಗಳಲ್ಲಿ ಹಾಕಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಳ್ಳ ಸಂತೆಯಲ್ಲಿ ಮಾರಾಟ ಮಾಡುತಿದ್ದಾರೆಂದು ದೂರಿದ ಅವರು ನಾನೆಂದು ಸುಳ್ಳು ಆರೋಪ ಮಾಡುವುದಿಲ್ಲ ತಾವೇ ಖುದ್ದಾಗಿ ಹಳ್ಳಿಗಳಲ್ಲಿರುವ ಬಡ ಜನರ ಬಳಿ ಹೋಗಿ ಕೇಳಿ ನೋಡಿ ಸತ್ಯ ಗೊತ್ತಾಗುತ್ತದೆ ಆವಾಗ ಪುಡ್ ಇನ್ಸ್‍ಪೆಕ್ಟರ್ ಹಾಗೂ ಆಹಾರ ನಿರೀಕ್ಷಕರ ಮತ್ತು ಈ ಇಲಾಖೆಯ ಅಧಿಕಾರಿಗಳ ಡೀಲರಗಳ ಬಂಡವಾಳ ಬಯಲಿಗೆ ಬರಲಿದೆ ಎಂದು ಮಾಧ್ಯಮದವರಿಗೆ ಸವಾಲು ಹಾಕಿದರು.
ಥಂಭ್ ಪಡೆದ ಕಾರ್ಡದಾರರು ರೇಷನ್ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರೆ ಅಂತವರ ಕಾರ್ಡ ರದ್ದು ಪಡಿಸುವುದು ಅಲ್ಲದೇ ಏನಾದರೂಂದು ನೆಪ ಹೇಳುವುದು ರೂಢಿ ಮಾಡಿಕೊಂಡು ಹೊರಟಿದ್ದಾರೆ ಇನ್ನು ಅರ್ಧದಷ್ಟು ಜನ ಪಡೀತರದಾರರು ಶ್ರೀಮಂತರಾಗಿದುವರಿಂದ ಈ ಅಕ್ಕಿ ಅವಶ್ಯಕತೆ ಅವರಿಗೆ ಬೀಳುವುದಿಲ್ಲ ಅವರಿಗೆ ಕೇವಲ ಬಿಪಿಎಲ್ ಕಾರ್ಡ ಬೇರೆ ಬೇರೆ ಕೆಲಸಗಳಿಗೆ ಬಳಕೆ ಮಾಡಲು ಬೇಕಾಗಿರುವದರಿಂದ ಅಂತವರು ರೇಷನ್ ತೆಗಿದುಕೊಳ್ಳುವದು ಗೋಜಿಗೆ ಹೋಗುವುದಿಲ್ಲ, ಇನ್ನು ಕೆಲವರು ಊರಲ್ಲಿ ಇರುವುದಿಲ್ಲ ನೆರೆ ರಜ್ಯಗಳಲ್ಲಿ ವಾಸವಗಿರುವುದರಿಂದ ಅವರಿಗೆ ರೇಷನ್ ಯವಾಗ ಬೇಕಾದರೂ ನೀಡಬಹುದು ಇಂತಹ ಕಳ್ಳಾಟ ನಡೆಸುವ ಮೂಲಕ ಬಡವರ ಪಾಲಿನ ಆಹಾರ ಧಾನ್ಯ ಲೂಟಿಯ ಜಾಲ ವ್ಯಾಪಕವಾಗಿ ಹರಡಿದೆ ಎಂದು ಗಂಭೀರವಾಗಿ ಆರೋಪಿಸಿದ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಒಂದು ದಿನವಾದರೂ ಪರಿಶೀಲನೆ ಮಾಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ ಅವರು ಇನ್ನಾದರೂ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗದಿದ್ದರೆ ಶೀಘ್ರದಲ್ಲಿ ಜನರೋಂದಿಗೆ ಉಗ್ರ ಹೋರಾಟಕ್ಕೆ ಮುಂದಾಗುವೆ ಎಂದು ಹೇಳಿದರು.