(ಸಂಜೆವಾಣಿ ವಾರ್ತೆ)
ಗೋಕಾಕ,ಜು28 : ಗೋಕಾಕಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೆÇೀಲಿಸರು ಹೆಡೆಮುರಿ ಕಟ್ಟಿದ್ದಾರೆ.
ಗೋಕಾಕದ ವಿವೇಕಾನಂದ ನಗರದ ಪ್ರಕಾಶ ಲಕ್ಷಣ ತೋಳಿನವರ ಇವರ ಮನೆಯಲ್ಲಿ ಹಾಗೂ ತವಗದ ಶ್ರೀ ಬೀರಸಿದ್ದೇಶ್ವರ ಗುಡಿಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದು, ಇವುಗಳ ಬಗ್ಗೆ ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ಪತ್ತೆಗಾಗಿ ಎಸ್.ಪಿ. ಅವರು ಗೋಕಾಕ ಸಿಪಿಐ ಗೋಪಾಲ.ಆರ್.ರಾಠೋಡ, ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಸದರಿ ತನಿಖಾ ತಂಡವು ಬೆಳಗಾವಿ ಹೆಚ್ಚುವರಿ ಎಸ್.ಪಿ.ಎಂ.ವೇಣುಗೋಪಾಲ , ಡಿವಾಯ್‍ಎಸ್ಪಿ ಡಿ ಎಚ್.ಮುಲ್ಲಾ ಡಿ.ಎಸ್.ಪಿ. ಮಾರ್ಗದರ್ಶನದಲ್ಲಿ ಸದರಿ ಪ್ರಕರಣಗಳಲ್ಲಿ ತನಿಖೆ ಕೈಕೊಂಡು ಆರೋಪಿತರನ್ನು ಬಂಧಿಸಿ, ಕಳುವಾಗಿದ್ದ 55,60,000 /- ರೂ ಮೌಲ್ಯದ 810 ಗ್ರಾಂ ತೂಕದ ಚಿನ್ನಾಭರಣಗಳು ಮತ್ತು 8.5 ಕೆ.ಜಿ. ತೂಕದ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದು, ಗೋಕಾಕ ಶಹರ ಮತ್ತು ಗೋಕಾಕ ಗ್ರಾಮೀಣ ಪೆÇಲೀಸ್ ಠಾಣೆಗಳ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.