ಕಳ್ಳರ ಕೈಚಳಕ ನಿಯಂತ್ರಿಸುವಂತೆ ಸಾರ್ವಜನಿಕರ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.27: ಶನಿವಾರ ರಾತ್ರಿ ಸುಮಾರು 10-00 ಗಂಟೆಯ ಸಮಯದಲ್ಲಿ ಪಟ್ಟಣದ ಮುತ್ತುರಾಯಸ್ವಾಮಿ ಬಡಾವಣೆಯಲ್ಲಿರುವ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಟ್ಯಾಂಕ್ ಆವರಣದಲ್ಲಿ ಪಟ್ಟಣಕ್ಕೆ ಜಲ ಜೀವನ್ ಮಿಷನ್ ಪೈಪ್ ಅಳವಡಿಸಲು ಬಂದಿರುವ ಕೂಲಿ ಕಾರ್ಮಿಕರ ಶೆಡ್‍ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಮಲಗಿದ್ದ ಮಹಿಳೆಯ ಚಿನ್ನದ ಕಿವಿಯೋಲೆ ಮತ್ತು ಸರ ಕಳವು ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಶೆಡ್‍ಗೆ ನುಗ್ಗಿದ ಕಳ್ಳ ಮಲಗಿದ್ದ ಮಹಿಳೆಯೊಬ್ಬರ ಕಿವಿಯೋಲೆ ಬಿಚ್ಚಿ, ಕತ್ತಿನ ಸರ ಕದಿಯಲು ಯತ್ನಿಸಿದ್ದಾನೆ. ಅಷ್ಠರಲ್ಲಿ ಮಹಿಳೆಗೆ ಎಚ್ಚರವಾಗಿ ಕೂಗಿಕೊಂಡಾಗ ಪಕ್ಕದ ಶೆಡ್‍ನಲ್ಲಿದ್ದ ಸಹ ಕಾರ್ಮಿಕರು ಮತ್ತು ಮುತ್ತುರಾಯಸ್ವಾಮಿ ಬಡಾವಣೆಯ ಜನರು ಓಡಿ ಬಂದಿದ್ದಾರೆ. ಜನ ಬರುತ್ತಿರುವುದನ್ನು ನೋಡಿದ ಕಳ್ಳ ಕಳ್ಳತನ ಮಾಡಲು ತಾನು ತಂದಿದ್ದ ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ. ಅನಂತರ ಅಲ್ಲಿದ್ದವರು ಪೆÇೀಲಿಸ್ ಸಹಾಯವಾಣಿಗೆ ಫೆÇೀನ್ ಮಾಡಿ ಕಳ್ಳತನದ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೆÇೀಲೀಸರು ಕಾರ್ಮಿಕರ ಬಳಿ ಮಾಹಿತಿ ಪಡೆದುಕೊಂಡು ಕಳ್ಳ ತಂದಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರ ಆತಂಕ:- ಪಟ್ಟಣದಲ್ಲಿ ಮಲಗಿದ್ದ ಮಹಿಳೆಯ ಶೆಡ್ ಒಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರ ಪ್ರಯತ್ನದಿಂದ ಮುತ್ತುರಾಯಸ್ವಾಮಿ ಬಡಾವಣೆಯ ಜನ ಸೇರಿದಂತೆ ಪಟ್ಟಣದ ನಾಗರೀಕರು ಆತಂಕಕ್ಕೆ ಸಿಲುಕಿದ್ದಾರೆ. ಈ ಕುರಿತು ಮಾತನಾಡಿರುವ ಬಡಾವಣೆಯ ನಿವಾಸಿ ಮಾಕವಳ್ಳಿ ಕುಮಾರ್ ಶೆಡ್ ಪಕ್ಕದಲ್ಲಿಯೇ ನಮ್ಮ ಮನೆಯಿದ್ದು ಮಹಿಳೆ ಕೂಗಿಕೊಂಡ ಕೂಡಲೇ ನಾವೆಲ್ಲರೂ ಹೊರಬಂದು ಶೆಡ್ ನತ್ತ ದಾವಿಸಿದೆವು. ಅಷ್ಠರಲ್ಲಿ ಕಳ್ಳ ಕತ್ತಲಿನಲ್ಲಿ ಜನರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಬೈಕ್ ನಲ್ಲಿ ಎಷ್ಠು ಜನ ದುಷ್ಕರ್ಮಿಗಳು ಬಂದಿದ್ದರು ಎನ್ನುವ ಮಾಹಿತಿಯಿಲ್ಲ. ಶೆಡ್ ಒಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಮಗೆಲ್ಲರಿಗೂ ಆತಂಕ ತಂದಿದೆ. ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮೊಬೈಲ್ ಕಳ್ಳತನ, ಸರಗಳ್ಳತನ ಮತ್ತು ಪಿಕ್ ಪಾಕೆಟ್ ಪ್ರಕರಣಗಳು ವಿಪರೀತ ಹೆಚ್ಚುತ್ತಿದೆ. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸುವ ಹಲವಾರು ಜನ ಬಸ್ ನಿಲ್ದಾಣದಲ್ಲಿ ಕಳ್ಳರ ಕೈ ಚಳಕ್ಕಕೆ ಬಲಿಯಾಗಿ ತಮ್ಮ ಹಣ, ಆಭರಣ ಹಾಗೂ ಮೊಬೈಲ್ ಕಳೆದುಕೊಂಡಿದ್ದಾರೆ. ಪಟ್ಟಣ ಪೆÇಲೀಸರು ಕಳ್ಳರ ಕೈಚಳಕವನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕು. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪ್ರಮಾಣದ ಸಿ.ಸಿ ಟಿ.ವಿ ಕ್ಯಾಮರಗಳನ್ನು ಅಳವಡಿಸಬೇಕು. ರಾತ್ರಿ ಗಸ್ತು ಹೆಚ್ಚಿಸಿ ಪಟ್ಟಣದ ನಾಗರೀಕರಿಗೆ ಸುರಕ್ಷತೆಯ ಭರವಸೆ ನೀಡುವಂತೆ ಮನವಿ ಮಾಡಿದ್ದಾರೆ.