ಕಳ್ಳನ ಬಂಧನ 102 ಗ್ರಾಂ ಬಂಗಾರ, ಆಟೋ ವಶ

ಬಳ್ಳಾರಿ ನ27 : ಕಳೆದ ಐದು ದಿನಗಳ ಹಿಂದೆ ನ 22 ರಂದು ನಗರದ ಕೌಲ್ ಬಜಾರ್ ಠಾಣೆಯಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಕಳ್ಳತನವಾದ ಮೂರೇ ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಠಾಣಾ ಸರಹದ್ದಿನ ದೊಡ್ಡ ಈದ್ಗಾ ಮೈದಾನದ ಹತ್ತಿರ ನಗರದ ಏಳು ತಾಯಿ ಮಕ್ಕಳ ಗುಡಿ ಹತ್ತಿರದ ವಾಸಿ ಅಜೇಯ, (25) ಬಂಧಿಸಿ ಆತನಿಂದ 4.59 ಲಕ್ಷ ರೂ ಬೆಲೆಬಾಳುವ 102 ಗ್ರಾಂ ಬಂಗಾರದ ಆಭರಣಗಳ ಹಾಗು ಒಂದು ಆಟೋವನ್ನು ವಶಪಡಿಸಿಕೊಂಡು ಮುಂದಿನ‌ ಕ್ರಮ ತೆಗೆದುಕೊಳ್ಳಲಾಗಿದೆ.