ಕಳ್ಳನ ಬಂಧನ 1 ಲಕ್ಷ ಮೌಲ್ಯದ ಬಂಗಾರ ಜಪ್ತಿ

ಆಳಂದ:ನ.4:ಕಳೆದ ಕೆಲವು ದಿನಗಳಿಂದ ದೇವಾಲಯದಲ್ಲಿ ಸಾಮಾನುಗಳನ್ನು , ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ನರೋಣಾ ಪೊಲೀಸರು ಬಂಧಿಸಿ 1 ಲಕ್ಷ ಮೌಲ್ಯದ ಬಂಗಾರದ ಆಭರಗಳು ಜಪ್ತಿ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.

ಜಿಲ್ಲಾ ಎಸ್ಪಿ, ಹೆಚ್ಚುವರಿ ಎಸ್.ಪಿ ಅವರ ಮಾರ್ಗದರ್ಶನದಲ್ಲಿ ಆಳಂದ ಸಿಪಿಐ ಅವರ ನೇತೃತ್ವದಲ್ಲಿ ನರೋಣಾ ಪಿಎಸ್‍ಐ ಉದಂಡಪ್ಪ ಹಾಗೂ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಸ್ವತ್ತಿನ ಪ್ರಕರಣಗಳಲ್ಲಿ ಪತ್ತೆ ಕರ್ತವ್ಯದಲ್ಲಿ ಇರುವಾಗ್ ಓರ್ವ ವ್ಯಕ್ತಿ ಮೇಲೆ ಬಲವಾದ ಸಂಶಯ ಬಂದ ಕಾರಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಡಗಂಚಿ ಗ್ರಾಮದ್ ನಾಗೇಶ ತಂದೆ. ದತ್ತಪ್ಪ ಆಲೂರೆ ಎಂದು ಗೋತ್ತಾಗಿದ್ದು. ಸೋಮುವಾರ ರಾತ್ರಿ ವೇಳೆ ಗ್ರಾಮದ ಯಲ್ಲಮ್ಮ ದೇವಸ್ಥಾನ ಬಾಗಿಲು ಮುಗಿದು ಬೀಗ ಮುರಿದು ಒಳಗೆ ಹೋಗಿ ದೇವರ ಕೊಡದ ಮೇಲೆ ಹಾಕಿರುವ ಬಂಗಾರದ ಆಭರಗಳು ಕಳ್ಳತನ ಮಾಡಿಕೊಂಡು ಹೋಗಿ ತನ್ನಿಯೆಯಲ್ಲಿ ತನ್ನ ತಪ್ಪು ಒಪ್ಪಿಕೊಂಡಿದ್ದು. ಒಂದು ಬಂಗಾರದ ಪತ್ತಿನ ಸರ ಅಂದಾಜು 50 ಸಾವಿರ, ಒಂದು ತೋಲೆ ಬಂಗಾರ ಗುಂಡಿನ ಸರ ಅಂದಾಜು 50 ಸಾವಿರ ರೂಪಾಯಿ ಒಟ್ಟು 1 ಲಕ್ಷ ರೂಪಾಯಿ ಕಿಮ್ಮತಿನ ಆಭರಗಳು ಇತನಿಂದ ಜಪ್ತಿ ಮಾಡಿಕೊಂಡು ಸದರಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.