ಕಳ್ಳತನ ಯತ್ನದ ವೇಳೆ ಬಾಲ ಏಸುವಿನ ಮೂರ್ತಿ ಧ್ವಂಸ : ಓರ್ವನ ಬಂಧನ

ಮೈಸೂರು: ಜ.3:- ಕಳ್ಳತನ ಯತ್ನದ ವೇಳೆ ಬಾಲ ಯೇಸುವಿನ ಕೆಳಗೆ ಬಿದ್ದಿದ್ದು, ಈ ಸಂಬಂಧ ಓರ್ವ ಕಳವು ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಸೀಮಾ ಲಟ್ಕರ್ ತಿಳಿಸಿದರು.
ಪಿರಿಯಾಪಟ್ಟಣ ಚೆರ್ಚ್ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿದೆ ಎಂಬ ಪ್ರಕರಣ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಕರಣದ ಸಂಬಂಧ ಮೂರು ತಂಡ ರಚನೆ ಮಾಡಲಾಗಿದೆ. ಬ್ಲೂ ಕಲರ್ ಹ್ಯಾಂಡ್ ಗ್ಲೌಸ್ ಸ್ಥಳದಲ್ಲಿ ಸಿಕಿತ್ತು, ಇದರ ಆಧಾರದ ಮೇಲೆ ವಿಶ್ವ ಎಂಬ ಪೌರ ಕಾರ್ಮಿಕನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು.
ಚರ್ಚ್‍ನಲ್ಲಿ ಪೌರಕರ್ಮಿಕನಾಗಿ ಮಾಡುತ್ತಿದ್ದ ಪಿರಿಯಾಪಟ್ಟಣದ ಮಹದೇಶ್ವರ ಬಡವಾಣೆ ನಿವಾಸಿಯಾಗಿರುವ ವಿಶ್ವನಿಗೆ ಎರಡು ತಿಂಗಳಿನಿಂದ ಚರ್ಚ್ ನಲ್ಲಿ ಸಂಬಂಳ ನೀಡಿರಲಿಲ್ಲ. ಕ್ರಿಸ್ ಮಸ್ ಸಂಧರ್ಭದಲ್ಲಿ ಫಾದರ್ ಜೊತೆ ಮಾತನಾಡಲು ಚೆರ್ಚ್ ಗೆ ಬಂದಿದ್ದಾನೆ. ಈ ವೇಳೆ ಫಾದರ್ ಭೇಟಿಯ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಹುಂಡಿ ಕಳ್ಳತನ ಮಾಡಲು ಚರ್ಚ್‍ಗೆ ಬಂದಿದ್ದಾನೆ.
ಮೂರು ಹುಂಡಿಯಲ್ಲಿ ಕಳ್ಳತನ ಮಾಡಿದ್ದಾನೆ. ಅಂದಾಜು 2 ರಿಂದ 3 ಸಾವಿರ ಹಣ ಇತ್ತು ವಿಚಾರಣೆ ವೇಳೆ ತಿಳಿಸಿದ್ದಾನೆ. ಬಾಲ ಏಸುವಿನ ಮೂರ್ತಿಯನ್ನ ಟೇಬಲ್ ಮೇಲೆ ಇಡಲಾಗಿತ್ತು.ಬಾಲ ಏಸುವಿನ ಮೂರ್ತಿ ಕೆಳಗೆ ಹಣ ಇರಬಹುದು ಎಂದು ಬಟ್ಟೆ ಎಳೆದಿದ್ದಾನೆ. ಈ ವೇಳೆ ಬಾಲ ಏಸುವಿನ ಮೂರ್ತಿ ಒಡೆದಿದೆ. ಪ್ರಕರಣ ಸಂಬಂಧ ಆರೋಪಿ ವಿಶ್ವ ಬಂಧಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಡಿವೈಎಸ್ಪಿ ಡಾ.ನಂದಿನಿ ಹಾಜರಿದ್ದರು.