ಕಳ್ಳತನ ಪ್ರಕರಣ: ಆರೋಪಿ ಬಂಧನ

ಹುಬ್ಬಳ್ಳಿ,ಏ14: ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಿಜಿನ್ ರಸ್ತೆ ಬದಿಯಲ್ಲಿ ಪಾರ್ಕ ಮಾಡಿದ್ದ ಕಾರಿನಲ್ಲಿದ್ದ ಬಂಗಾರದ ಒಡವೆ ಮತ್ತು ಮೊಬೈಲ್ ಕಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಮ್.ಎಸ್.ಹೂಗಾರ ಪೊಲೀಸ್ ಇನ್ಸಪೆಕ್ಟರ್ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿನ ವಿಶೇಷ ತಂಡವು ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿ 2,75,000/- ರೂ ಮೌಲ್ಯದ 55 ಗ್ರಾಂ ಬಂಗಾರದ ಆಭರಣಗಳು ಮತ್ತು 01 ಮೊಬೈಲ್ ನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
ಪ್ರಕರಣದ ಪ್ರಮುಖ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಹೂಗಾರ, ನೇತೃತ್ವದ ವಿಶೇಷ ತಂಡಕ್ಕೆ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.