ಕಳ್ಳತನವಾದ ಆಕಳು ಹಾಗೂ ಎತ್ತು ಪತ್ತೆ

ಹುಮನಾಬಾದ್ :ಜು.5: ತಾಲೂಕಿನ ಧುಮ್ಮನಸೂರ ಗ್ರಾಮದಲ್ಲಿ ಕಳ್ಳತನವಾದ ಆಕಳು ಹಾಗೂ ಎತ್ತು ಪತ್ತೆ ಹಚ್ಚುವಲ್ಲಿ ಹುಮನಾಬಾದ್ ಪೆÇಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.

ಕಳೆದ ಜೂನ್ 25ರಂದು ರಾತ್ರಿಯಲ್ಲಿ ಹುಮನಾಬಾದ್ ತಾಲೂಕಿನ ಧುಮ್ಮನಸೂರ ಗ್ರಾಮದ ಜಗನ್ನಾಥ ತುಕಾರಾಮ ಮೇತ್ರಿಗೆ ಸೇರಿರುವ ದನಗಳ ಕೊಟ್ಟಿಗೆಯಿಂದ ಒಂದು ಆಕಳು ಮತ್ತೊಂದು ಎತ್ತು ಕಳುವು ಮಾಡಿಕೊಂಡು ಹೋಗಿರುವ ಘಟನೆ ಜರುಗಿತ್ತು.

ಜಾನುವಾರುಗಳ ಮಾಲೀಕ ಜಗನಾಥ ತುಕಾರಾಮ ಮೇತ್ರೆ ನೀಡಿರುವ ದೂರಿನ ಅನ್ವಯ ಬೀದರ್ ಎಸ್ ಪಿ ಚನ್ನಬಸವಣ್ಣ, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ್, ಏ ಎಎಸ್ಪಿ ಶಿವಾಂಶು ರಜಪೂತ, ಸಿಪಿಐ ಶರಣಬಸಪ್ಪ ಕೊಡ್ಲಾ ಮಾರ್ಗದರ್ಶನದಲ್ಲಿ ಪಿಎಸ್‍ಐ ಸುರೇಶ್ ಹಜ್ಜರ್ಗಿ, ಪಿಎಸ್‍ಐ ಮಂಜನಗೌಡ ಪಾಟೀಲ್ ಸೇರಿದಂತೆ ಸಿಬ್ಬಂದಿಗಳ ತಂಡ ಬಿರುಸಿನ ತನಿಖೆ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಸಾವಿರದ ಆಕಳು ಹಾಗೂ 40 ಸಾವಿರದ ಎತ್ತು ಸೇರಿ ಒಟ್ಟು 60 ಸಾವಿರ ಮೌಲ್ಯದ ಬೆಲೆಬಾಳುವ ಜಾನುವಾರುಗಳು ವಶಕ್ಕೆ ಪಡೆದು, ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ