ಕಳೆದ ವರ್ಷದ ಪ್ಯಾಕೇಜ್ ತಲುಪಿಲ್ಲ

ಕಲಬುರಗಿ:ಮೇ.21: ಕಳೆದ ವರ್ಷದ ಮೊದಲ ಹಂತದ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದ ಹಾಗೂ ಹಾನಿಗೊಳಗಾದ ವರ್ಗಕ್ಕೆ ವಿಶೇಷ ಪ್ಯಾಕೇಜ್ ವೇ ಸಮರ್ಪಕವಾಗಿ ತಲುಪಲಿಲ್ಲ. ಘೋಷಣೆಗೆ ಮಾತ್ರ ಸಿಮೀತ ಎನ್ನುವಂತಾಯಿತು. ಈ ಸಲ ಹಾಗಾಗಿ ಈ ವರ್ಷ ಹಾಗಾಗದಿರಲಿ ಎಂದು ಕಾಂಗ್ರೆಸ್ ನ ಮುಖಂಡರಾದ ನೀಲಕಂಠರಾವ ಮೂಲಗೆ ಸಲಹೆ ನೀಡಿದ್ದಾರೆ.

ಕಳೆದ ಸಲ ಹೂವು, ಕಲ್ಲಂಗಡಿ, ಬಾಳೆ ಸೇರಿದಂತೆ ಇತರ ಬೆಳೆ ಹಾನಿಗೆ ಹೆಕ್ಟೇರಿಗೆ ಇಪ್ಪತ್ತು ಸಾವಿರ ಪರಿಹಾರ ಘೋಷಣೆ ಮಾಡಲಾಯಿತು. ಆದರೆ ರೈತರಿಗೆ ಪರಿಹಾರ ದೊರಕಲೇ ಇಲ್ಲ. ತಾಲೂಕಿನಲ್ಲಿ ಹತ್ತಿಪ್ಪತ್ತು ರೈತರಿಗೆ ದೊರೆತರೆ ಉಳಿದ ರೈತರಿಗೆ ಸಿಗಲೇ ಇಲ್ಲ. ಅದೇ ರೀತಿ ಅಟೋ ಚಾಲಕರಿಗೆ ಸಮಾರಂಭ ಮಾಡಿ ಚೆಕ್ ವಿತರಿಸಲಾಯಿತು. ಆದರೆ ಸಿಕ್ಕವರಿಗೆ ಸಿರುಂಡೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದೇ ರೀತಿ ಉಳಿದವರಿಗೂ ಇದೇ ಪರಿಸ್ಥಿತಿ ಉಂಟಾಗಿರುವುದನ್ನು ಇನ್ನೂ ಯಾರು ಮರೆತ್ತಿಲ್ಲ ಎಂದಿದ್ದಾರೆ.

ಕೇವಲ ಮೂರು ಸಾವಿರ ಪರಿಹಾರ ಮೂಗಿಗೆ ತುಪ್ಪ ಸವರುವಂತಾಗಿದೆ. ಪರಿಹಾರ ಪಡೆಯಲು ಹತ್ತಾರು ದಾಖಲೆಗಳನ್ನು ಕೇಳಲಾಗುತ್ತದೆ. ಪ್ರಸಕ್ತ ಲಾಕ್ ಡೌನ್ ಇರೋದ್ರದಿಂದ ದಾಖಲೆಗಳನ್ನು ಪಡೆಯಲು ಅಸಾಧ್ಯ. ಹೀಗಾಗಿ ಅಯಾ ಇಲಾಖೆಗಳಲ್ಲಿರುವ ಮಾಹಿತಿಗಳನ್ನು ಪಡೆದು ನೇರವಾಗಿ ಖಾತೆಗಳಿಗೆ ಪರಿಹಾರ ಜಮಾ ಮಾಡಬೇಕು. ಕನಿಷ್ಠ ಐದು ಸಾವಿರ ರೂ ಪರಿಹಾರ ನೀಡಬೇಕೆಂದು ಮೂಲಗೆ ಅವರು ಆಗ್ರಹಿಸಿದ್ದಾರೆ.