ಕಳೆದ ಬಾರಿ ತಾಯಿ, ಮಗ ಈ ಬಾರಿ ಪತಿ ಪತ್ನಿ ಗೆಲುವು

ಚಿತ್ತಾಪುರ:ಜ.1:ತಾಲೂಕಿನ ಭೀಮನಹಳ್ಳಿ ಗ್ರಾಪಂ ವ್ಯಾಪ್ತಿಯ ರಾಮತೀರ್ಥ ಗ್ರಾಮದಲ್ಲಿ ಕಳೆದ ಚುನಾವಣೆಯಲ್ಲಿ ತಾಯಿ ಸೀತಾಬಾಯಿ ಪವಾರ ಹಾಗೂ ಮಗ ಅಯ್ಯಪ್ಪ ಪವಾರ್ ಗ್ರಾಪಂ ಸದಸ್ಯರಾಗಿ ಅಯ್ಕೆಯಾಗಿ ಗಮನಸೆಳೆದಿದ್ದರು. ಅಲ್ಲದೇ ಸೀತಾಬಾಯಿ ಭೀಮಹಳ್ಳಿ ಗ್ರಾಪಂ ಅಧ್ಯಕ್ಷೆಯಾಗಿ ಯಶಸ್ವಿಯಾಗಿ 5 ವರ್ಷಗಳ ಅವಧಿ ಪೂರೈಸಿದ ನಂತರ ಈ ಚುನಾವಣೆಯಲ್ಲಿ ಅವರು ತಮ್ಮ ಮಗ ಅಯ್ಯಪ್ಪ ಪವಾರ ಹಾಗೂ ಸೊಸೆಗೆ ಈ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದ್ದರು.

ಈ ಬಾರಿಯೂ ಕೂಡಾ ಅಯ್ಯಪ್ಪ ಪವಾರ್ ಮತ್ತು ಲಕ್ಷ್ಮಿ ಪವಾರ ಜಯಗಳಿಸುವದರೊಂದಿಗೆ ಕಳೆದ ಚುನಾವಣೆಯಂತೆಯೇ ಈ ಬಾರಿಯೂ ಗಮನ ಸೆಳೆದಿದ್ದಾರೆ. ಮತ್ತು ತಮ್ಮ ಪ್ರತಿಸ್ಪರ್ಧಿಗಿಂತ 213 ಮತಗಳು ಹಾಗೂ ಅವರ ಪತ್ನಿ ಲಕ್ಷ್ಮಿ 106 ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ಗಮನಸೆಳೆದಿದ್ದಾರೆ. ಗ್ರಾಮದ ಒಟ್ಟು 5 ಸ್ಥಾನಗಳನ್ನು ಗೆಲ್ಲುವದರ ಮೂಲಕ ಬಿಜೆಪಿ ಬೆಂಬಲಿತರಿಗೆ ಹೆಚ್ಚಿನ ಬಲ ನೀಡಿದ್ದಲ್ಲದೇ ಗ್ರಾಮದಲ್ಲಿ ಮತ್ತೆ ತಮ್ಮ ಪ್ರಭುತ್ವವನ್ನು ತೊರಿಸಿದ್ದಾರೆ.
ರಾಮತೀರ್ಥ ಗ್ರಾಮವು ಚಿತ್ತಾಪುರ ತಾಲೂಕು ಪಂಚಾಯತ ಅಧ್ಯಕ್ಷರ ಸ್ವಕ್ಷೇತ್ರವಾಗಿದ್ದು ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ 5 ಅಭ್ಯರ್ಥಿಗಳು ಗೆಲುವು ಸಾಧಿಸುವದರ ಮೂಲಕ ಅವರಿಗೆ ಹಿನ್ನಡೆಯಾಗುವಂತೆ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ನಾನು ಹಾಗೂ ನನ್ನ ತಾಯಿ ಸೀತಾಬಾಯಿ ಗ್ರಾಮದ ಅಭಿವೃದ್ದಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವದಲ್ಲದೇ ಉದ್ಯೊಗ ಖಾತ್ರಿ ಯೊಜನೆಯಲ್ಲಿ ಗ್ರಾಮಕ್ಕೆ ಹಲವಾರು ಕಾಮಗಾರಿಗಳನ್ನು ಮಾಡಿರುವದೇ ನಮ್ಮ ಗೆಲುವಿಗೆ ಸಹಕಾರಿಯಾಗಿದೆ. ಮುಂದೆ ಇನ್ನು ಹೆಚ್ಚಿನ ಅಭಿವೃದ್ದಿಗೆ ಶ್ರಮಿಸುವದಾಗಿ ಹೇಳುತ್ತಾರೆ ನೂತನ ಗ್ರಾಪಂ ಸದಸ್ಯ ಅಯ್ಯಪ್ಪ ಪವಾರ ದಂಪತಿಗಳು.