ಕಳೆದ ನಾಲ್ಕು ವರ್ಷದಲ್ಲಿ 794 ಉಗ್ರರ ಹತ್ಯೆ: 639 ಮಂದಿ ಉಗ್ರ ಸಂಘಟನೆಗೆ ಸೇರ್ಪಡೆ

ನವದೆಹಲಿಯ, ನ.21- ಜಮ್ಮು-ಕಾಶ್ಮೀರದಲ್ಲಿ ಕಳೆದ ನಾಲ್ಕು ವರ್ಷದ ಅವದಿಯಲ್ಲಿ 794 ಮಂದಿಯನ್ನು ಭದ್ರತಾಪಡೆಗಳು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿವೆ.

ಇದೇ ಅವಧಿಯಲ್ಲಿ 639 ಮಂದಿ ಯುವಕರು ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ

ಕಳೆದ ವರ್ಷ 145 ಅಧಿಕ ಮಂದಿಯನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎನ್ನುವ ಆಘಾತಕಾರಿ ಸುದ್ದಿ ಬಹಿರಂಗ ಗೊಂಡಿದೆ.

ಕಳೆದ ಹತ್ತು ವರ್ಷಗಳಲ್ಲಿ ಒಂದೇ ವರ್ಷದಲ್ಲಿ ಹೆಚ್ಚುಮಂದಿ ಉಗ್ರ ಸಂಘಟನೆಗೆ ಸೇರಿದ ಎರಡನೇ ಅತಿ ದೊಡ್ಡ ಸಂಖ್ಯೆ ಇದಾಗಿದೆ.

ಜಮ್ಮು-ಕಾಶ್ಮೀರದ ಯುವ ಸಮುದಾಯವನ್ನು ವಿವಿಧ ಆಸೆ ಆಮಿಷ ತೋರಿಸಿ ಉಗ್ರ ಸಂಘಟನೆಗಳಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎನ್ನುವ ಮಾಹಿತಿಯನ್ನು ಗುಪ್ತಚರ ಸಂಘಟನೆಗಳು ಹೊರಹಾಕಿವೆ.

ಜನವರಿಯಿಂದ ಇಲ್ಲಿಯ ತನಕ 195 ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ ಎಂದು ಭದ್ರತಾ ಪಡೆಗಳು ಮಾಹಿತಿ ನೀಡಿವೆ. ಇದರಲ್ಲಿ 20 ವಿದೇಶಿ ಉಗ್ರರು ಸೇರಿದ್ದಾರೆ ಎನ್ನುವ ವಿಷಯವನ್ನು ಗುಪ್ತಚರ ಸಂಸ್ಥೆ ತಿಳಿಸಿದೆ.