ಕಳೆದು ಹೋದ 12 ಲಕ್ಷ ರೂ. ಮೌಲ್ಯದ 52 ಮೊಬೈಲ್‍ಗಳು ಪತ್ತೆ

ಬೀದರ: ಮೇ. 14: ನೂತನ ನಗರ ಪೆÇಲೀಸ್ ಠಾಣೆಯ ಸರಹದ್ದಿನಲ್ಲಿ ಈ-ಲಾಸ್ಟ್ ಮತ್ತು ಸಿ.ಇ.ಐ.ಆರ್.ಫೆÇೀರ್ಟನಲ್ಲಿ ಸಾರ್ವಜನಿಕರು ಮೊಬೈಲ್ ಕಳೆದು ಹೋದ ಬಗ್ಗೆ ದಾಖಲಾಗಿದ್ದ ಪ್ರಕರಣವನ್ನು ಭೇದಿಸಿ 12,00,000 ರೂ. ಕಿಮ್ಮತಿನ ಬೆಳೆಬಾಳುವ ಒಟ್ಟು 52 ಮೊಬೈಲ್‍ಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ಅವರು ಸೋಮವಾರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಮರಳಿಸಿ ಮಾತನಾಡಿದರು.
ಜಿಲ್ಲೆಯ ಸಾರ್ವಜನಿಕರು ತಮ್ಮ ಮೊಬಯಲ್ ಕಳೆದು ಹೋದಲಿ ಯಾರಾದರು ಕಳ್ಳುವು ಮಾಡಿಕೊಂಡು ಹೋದಲ್ಲಿ ನೀವು ಈ-ಲಾಸ್ಟ್ ಅಥವ ಸಿ.ಈ.ಐ.ಆರ್. ಪೆÇೀರ್ಟಲ್‍ನಲ್ಲಿ ನಿಮ್ಮ ದೂರುಗಳನ್ನು ದಕಲಿಸಿದರೆ ತಮ್ಮ ಮೊಬೈಲ್‍ಗಳನ್ನು ಅದಷ್ಟು ಬೇಗ ಬೀದರ ಜಿಲ್ಲಾ ಪೆÇಲೀಸ್ ಪತ್ತೆ ಹಚ್ಚಿ ದೂರುದಾರರಿಗೆ ಹಿಂದಿರುಗಿಸಲಾಗುವುದು ಎಂದು ಹೇಳಿದರು. ಈ ಪ್ರಕರಣವನ್ನು ಭೇಧಿಸಿದ ಪೆÇಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಬೀದರ ಹೆಚ್ಚುವರಿ ಪೆಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ, ಬೀದರ ಪೆÇಲೀಸ್ ಉಪಾಧೀಕ್ಷಕ ಶಿವನಗೌಡ ಪಾಟೀಲ, ನೂತನ ನಗರ ಠಾಣೆಯ ಪಿಐ ಸಂತೋಷ ಎಲ್.ಟಿ, ಸಿಬ್ಬಂದಿಯಾದ ರಾಹುಲ, ಸಚೀನ, ಸಂತೋಷ, ರಾಮಣ್ಣ, ಧನರಾಜ, ಮಲ್ಲಿಕಾರ್ಜುನ, ಭರತ, ನಿಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.