ಕಳುವಾದ 5.06ಕೋಟಿ ರೂ.ಮೌಲ್ಯದ ಮಾಲುಗಳ ವಶ

ಮೈಸೂರು, ನ.29:- ಕಳೆದ ಒಂದು ವರ್ಷದಲ್ಲಿ ಒಟ್ಟು 374 ವಿವಿಧ ಸ್ವತ್ತು ಕಳುವು ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, 301 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಒಟ್ಟು 5.06ಕೋಟಿ ರೂ.ಮೌಲ್ಯದ ಕಳುವಾದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ಇಂದು ಮೈಸೂರು ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ತಮ್ಮ ಕಛೇರಿ ಎದುರು ಕಳುವಾದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು 2020ನವೆಂಬರ್ ನಿಂದ 2021 ನವೆಂಬರ್ ವರೆಗೆ ಒಟ್ಟು 676 ಪ್ರಕರಣಗಳು ದಾಖಲಾಗಿತ್ತು. ಅದರಲ್ಲಿ ಒಟ್ಟು 374ಪ್ರಕರಣಗಳು ಪತ್ತೆಯಾಗಿತ್ತು. ಇದರಲ್ಲಿ ಒಟ್ಟು 7.34ಕೋಟಿ ಮೌಲ್ಯದ ಸ್ವತ್ತುಗಳು ಕಳುವಾಗಿತ್ತು. ಒಟ್ಟು 5.06ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು 301 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
6 ಕೆಜಿ 439 ಗ್ರಾಂ ಚಿನ್ನಾಭರಣ, 8ಕೆಜಿ 245ಗ್ರಾಂ ಬೆಳ್ಳಿ ಪದಾರ್ಥ, 196ದ್ವಿಚಕ್ರವಾಹನ, 6ಕಾರು/ಜೀಪು, 10 ಇತರೆ ವಾಹನ, 49ಮೊಬೈಲ್ ಫೆÇೀನ್ ಗಳು, 2ಲ್ಯಾಪಟ್ ಟಾಪ್ , 309ಕೆಜಿ ಗಂಧದ ಮರದ ತುಂಡುಗಳು, 18,77,980ರೂ.ನಗದು, 6 ಜಾನುವಾರುಗಳ ಜೊತೆಗೆ ಗೃಹೋಪಯೋಗಿ, ಕೈಗಾರಿಕೋಪಯೋಗಿ ಮತ್ತು ಇತರೆ ಮಾಲುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು.
4ದರೋಡೆ ಪ್ರಕರಣಗಳು ನಡೆದಿದ್ದು, ನಾಲ್ಕೂ ಪತ್ತೆಯಾಗಿವೆ. 29 ಸುಲಿಗೆ ಪ್ರಕರಣ ದಾಖಲಾಗಿತ್ತು 17ಪ್ರಕರಣ ಪತ್ತೆಯಾಗಿವೆ. 50ಸರಗಳ್ಳತನ ದಾಖಲಾಗಿತ್ತು. 34 ಪತ್ತೆಯಾಗಿವೆ. ಕನ್ನ ಕಳುವು (ಹಗಲು ಮತ್ತು ರಾತ್ರಿ) 132ಪ್ರಕರಣ ದಾಖಲಾಗಿತ್ತು. 47 ಪತ್ತೆಯಾಗಿದೆ. ಮನೆ ಕಳುವು 18 ಪ್ರಕರಣ ದಾಖಲಾಗಿತ್ತು. 9 ಪತ್ತೆಯಾಗಿವೆ. ಕೆಲಸದವರಿಂದ ಕಳ್ಳತನ 9 ಪ್ರಕರಣ ದಾಖಲಾಗಿತ್ತು. 5ಪತ್ತೆಯಾಗಿವೆ. ವಾಹನ ಕಳುವು 330 ಪ್ರಕರಣ ದಾಖಲಾಗಿತ್ತು. 212 ಪತ್ತೆಯಾಗಿದೆ. ಸಾಮಾನ್ಯ ಕಳುವು 88ಪ್ರಕರಣ ದಾಖಲಾಗಿತ್ತು. 35ಪತ್ತೆಯಾಗಿವೆ. ಜಾನುವಾರು ಕಳುವು ಪ್ರಕರಣ 11ದಾಖಲಾಗಿತ್ತು. 6ಪತ್ತೆಯಾಗಿವೆ. ಕೆ.ಎಫ್ ಆಕ್ಟ್ 5ಪ್ರಕರಣ ದಾಖಲಾಗಿತ್ತು. 5 ಪತ್ತೆಯಾಗಿವೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.