
ಬ್ಯಾಡಗಿ,ಮೇ25: ದೇವಾಲಯಗಳು ಕೇವಲ ಆರಾಧನಾ ಸ್ಥಳಗಳಲ್ಲದೇ ಹಿಂದೂ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವಾಲಯಗಳಿಗೆ ವಿಶೇ?À ಸ್ಥಾನವಿದೆ, ದೇವಾಲಯಗಳು ನಮ್ಮ ಸಂಸ್ಕøತಿ ಮತ್ತು ಸಂಪ್ರದಾಯದ ಭಂಡಾರವಾಗಿದ್ದು ಭಾರತೀಯ ಇತಿಹಾಸ ಮತ್ತು ನಮ್ಮ ಸಂಸ್ಕøತಿಯ ತಳಹದಿಯಾಗಿವೆ ಎಂಬುದು ಸರ್ವಕಾಲಿಕ ಸತ್ಯ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಚಾವಡಿ ರಸ್ತೆಯಲ್ಲಿನ ದೊಡ್ಡ ಹನುಮಂತದೇವರ ದೇವಸ್ಥಾನ ಆವರಣದಲ್ಲಿ ಶ್ರೀ ಕಾಶೀರಾಮ ಹಾಗೂ ಶ್ರೀ ಮಾರುತಿ ದೇವಸ್ಥಾನಗಳ ಪುನಃ ಪ್ರತಿಷ್ಠಾಪನೆ, ನೂತನ ವಿಮಾನ ಗೋಪುರ ಮತ್ತು 55 ಅಡಿ ಎತ್ತರದ ರಾಜಗೋಪುರಗಳ ಕಳಸಾರೋಹಣ ಹಾಗೂ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೇವಾಲಯಗಳ ವಾಸ್ತುಶೈಲಿ ಬಹಳ ವಿಶಿಷ್ಠವಾಗಿದೆ ಪ್ರಪಂಚದ ಅದ್ಭುತಗಳಲ್ಲಿ ಕೂಡ ಒಂದಾಗಿದ್ದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಕೆಲವು ಸುಂದರವಾದ ದೇವಾಲಯಗಳಿಗೆ ಭಾರತ ನೆಲೆಯಾಗಿದೆ ಬ್ಯಾಡಗಿ ಪಟ್ಟಣದಲ್ಲಿಯೇ ಅತ್ಯಂತ ಸುಂದರವಾದ ಗೋಪುರ ನಿರ್ಮಾಣವಾಗಿರುವುದು ಖುಷಿಯ ಸಂಗತಿ ಎಂದರು.
ಸಚ್ಚಾರಿತ್ರದ ಬದುಕು ನಡೆಸಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಭೌತಿಕ ಸಂಪತ್ತು ಶಾಶ್ವತವಲ್ಲ, ಹುಟ್ಟಿರುವ ಬದುಕು ಶಾಶ್ವತವಲ್ಲ ಆದರೆ ಸಂಸ್ಕಾರ ಸಂಸ್ಕøತಿ ಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ, ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ, ಸನ್ಮಾರ್ಗದಲ್ಲಿ ನಡೆಯುವ ಮೂಲಕ ನಾವೆಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಬೇಕಿದೆ ಎಂದರು.
ಆಸ್ತಿಕ ಮನೋಭಾವನೆಯಿಂದ ನೆಮ್ಮದಿ: ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ರಾಜ್ಯಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ದೇವಾಲಯಗಳನ್ನು ಧರ್ಮದ ಪ್ರಮುಖ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಆಸ್ತಿಕ ಮನೋಭಾವನೆ ಹೊಂದಿರುವ ಪ್ರತಿಯೊಬ್ಬರ ಮನಸ್ಸಿನಲ್ಲಿ ದೇವಾಲಯಗಳು ಪ್ರಮುಖ ಸ್ಥಾನವನ್ನು ಹೊಂದಿವೆ ದೇವಸ್ಥಾನಗಳು ನೆಮ್ಮದಿ ನೀಡುವ ತಾಣಗಳು, ಆದರೆ ಧರ್ಮದ ಮೌಲ್ಯಗಳನ್ನು ಪರಿಪಾಲಿಸಿದರೆ ಮಾತ್ರ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದರು.
ಇದಕ್ಕೂ ಮುನ್ನ ದೇವತಾ ಪ್ರಾರ್ಥನೆ, ಸ್ಥಾಪಿತ ದೇವತಾ ಪೂಜೆ, ಅಧಿವಾಸ ಹೋಮ, ಪ್ರತಿಷ್ಠಾ ಹೋಮ, ಮಿಥುನ ಲಗ್ನದಲ್ಲಿ ಉಭಯ ದೇವರು ಪುನಃ ಪ್ರತಿಷ್ಠಾಪನೆ, ವಿದೇಶ ಕಲಶ ನಿದ್ರಾಕಲಶಾಭಿ?Éೀಕ, ವಿಮಾನ ಗೋಪುರ, 55 ಅಡಿ ಎತ್ತರದ ರಾಜಗೋಪುರಗಳಿಗೆ ನೂತನ ಕಲಶಾರೋಹಣ ನಿಲೀಕ್ಷಾಪೂಜೆ, ನಿರೀಕ್ಷಾ ಬಲಿ, ಕವಾಟ ಬಂಧನ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಿದವು.
ಶ್ರೀ ಮುಪ್ಪಿನೇಶ್ವರ ಮಠದ ಮ.ನಿ.ಪ್ರ.ಮಲ್ಲಿಕಾರ್ಜುನಶ್ರೀಗಳು ಸಾನಿಧ್ಯ ವಹಿಸಿದ್ದರು, ಆಡಳಿತ ಮಂಡಳಿಯ ಗಜಾನನ ರಾಯ್ಕರ್, ಲಕ್ಷ್ಮೀನಾರಾಯಣ (ಬಾಬಣ್ಣ) ಮೇಲಗಿರಿ, ಪುರಸಬೆ ಸದಸ್ಯೆ ಗಾಯತ್ರಿ ರಾಯ್ಕರ್, ರಾಧಣ್ಣ ರಟ್ಟೀಹಳ್ಳಿ, ಸುರೇಶ ಮೇಲಗಿರಿ, ಎನ್.ಎಲ್.ಅಗಡಿ, ಕೃಷ್ಣಯ್ಯ ಶೆಟ್ಟಿ, ಪರುಶರಾಮ ಮೇಲಗಿರಿ, ಉಮೇಶ ವೆರ್ಣೇಕರ, ನರಸಪ್ಪ ದಾಸರ, ಶಿವರಾಜ್ ಶೆಟ್ಟಿ, ನಾಗರಾಜ ದೇಸೂರ, ಮಾಲತೇಶ ಉಮಾಪತಿ, ಜಿತೇಂದ್ರ ಸುಣಗಾರ ಸೇರಿದಂತೆ ಇನ್ನಿತರರಿದ್ದರು.