ಕಳಸಾರೋಹಣ ಕಾರ್ಯಕ್ರಮ

ಹುಬ್ಬಳ್ಳಿ, ಏ 24: ನಗರದ ಹಳೇಹುಬ್ಬಳ್ಳಿ ಬಾಗಾರ್ಪೇಟ್ 1ನೇ ಕ್ರಾಸ್‍ನಲ್ಲಿ ಶ್ರೀ ಮಾರುತಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಮತ್ತು ನೂತನ ನಾಗದೇವರ ಮೂರ್ತಿ ಪ್ರತಿಷ್ಠಾಪನ ಹಾಗೂ ಹನುಮ ಜಯಂತಿ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಶ್ರೀ ತಪೆÇರತ್ನ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಹನ್ನೆರಡುಮಠ ಕಲಘಟಗಿ ವಹಿಸಿದ್ದರು. ವಿಶ್ವೇಶ್ವರಯ್ಯ ಹಿರೇಮಠ ವೇದಮೂರ್ತಿ ಫಕೀರಯ್ಯ ಹಿರೇಮಠ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ದಿ. 21 ರಿಂದ ದಿ. 24 ರವರೆಗೆ ಕಾರ್ಯಕ್ರಮದಲ್ಲಿ ಮಾರುತಿ ದೇವಸ್ಥಾನ ಸೇವಾ ಸಮಿತಿ, ಮಹಿಳಾ ಮಂಡಳ ಗುರುಹಿರಿಯರು, ಮಾತೆಯರು ಸುತ್ತು ಮುತ್ತಲಿನ ನಾಗರಿಕರು ಭಾಗವಹಿಸಿ ವಿಜೃಂಭಣೆಯಿಂದ ನಡೆಯಿತು.

ಬ್ರಾಹ್ಮಿ ಮುಹೂರ್ತದಲ್ಲಿ ನೂತನ ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಗೋಪುರಕ್ಕೆ ಕಳಸಾರೋಹಣ ಮಾಡಿ ರುದ್ರಾಭಿಷೇಕ, ನವಗ್ರಹ ಹೋಮ, ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿತು. ಅನ್ನಸಂತರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಬಡಾವಣೆಗಳು ನಾಗರೀಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.