ಕಳವು ಪ್ರಕರಣ ಪಿಸ್ತೂಲು ವಶ

ಚಿಕ್ಕಮಗಳೂರು,ಜ.೯:ಚಿಕ್ಕಮಗಳೂರು ವ್ಯಕ್ತಿಯೋರ್ವನನ್ನು ಬಂಧಿಸಿರುವ ನಗರ ಠಾಣೆ ಪೊಲೀಸರು ೧೨ ಲಕ್ಷ ರೂ. ಬೆಲೆ ಬಾಳುವ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಪಿಸ್ತೂಲ್, ೧೨ ನೈಜ ಗುಂಡುಗಳು, ಚಿನ್ನಾಭರಣ ಇತರೆ ವಸ್ತುಗಳು ಸೇರಿವೆ.ಇಲ್ಲಿನ ಕಲ್ಯಾಣ ನಗರದ ಬಳಿ ಠಾಣಾಧಿಕಾರಿ ನಾಗೇಂದ್ರ ಮತ್ತವರ ತಂಡ ಕಾರು ಒಂದನ್ನು ತಡೆದು ಪರಿಶೀಲಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಪ್ಪಳ್ಳಿ ಸಹರಾ ಶಾದಿ ಮಹಲ್ ಸಮೀಪದ ನಿವಾಸಿ ಅಹ್ಮದ್ ಕಬೀರ್ ಎಂದು ತಿಳಿದು ಬಂದಿದೆ. ಬಂಧಿತ ವ್ಯಕ್ತಿಯ ಬಳಿ ರಾಡು ಇನ್ನಿತರ ವಸ್ತುಗಳು ಇದ್ದು, ಈತ ಈ ಹಿಂದೆ ಬಾಳೆಹೊನ್ನೂರು ಸೊಸೈಟಿ ಸೇರಿದಂತೆ ೧೨ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆಗಿರುವುದು ಬೆಳಕಿಗೆ ಬಂದಿದೆ. ೨೯೨ ಗ್ರಾಂ ಚಿನ್ನ ೩೦೦ ಗ್ರಾಂ ಬೆಳ್ಳಿಯ ಆಭರಣಗಳು ದೊರಕಿತು ಬೈಕ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ