
ಸಂಜೆವಾಣಿ ವಾರ್ತೆ
ಹನೂರು: ಆ.11:- ತಾಲೂಕಿನ ನಾಲ್ ರೋಡ್ ಗ್ರಾಮದ ಮನೆಯೊಂದರಲ್ಲಿ ಕಳೆದ ತಿಂಗಳ ಹಿಂದೆ ಚಿನ್ನಾಭರಣ ಮತ್ತು ಲಕ್ಷಾಂತರ ರೂ. ನಗದು ಹಣ ಕಳವು ಪ್ರಕರಣ ಸಂಬಂಧಿಸಿದಂತೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ರಾಮಪುರ ಪೆÇಲೀಸ್‍ರು ಯಶಸ್ವಿಯಾಗಿದ್ದಾರೆ.
ರಾಮಪುರ ಪೆÇಲೀಸ್ ಠಾಣೆ ವ್ಯಾಪ್ತಿಯ ನಾಲ್ ರೋಡ್ ಗ್ರಾಮದಲ್ಲಿ ಕಳೆದ ತಿಂಗಳ ದಿನಾಂಕ 27/07/2023 ರಂದು ಚಿನ್ನಮ್ಮ ಎಂಬುವರ ಮನೆಯಲ್ಲಿ 150 ಗ್ರಾಂ ಚಿನ್ನ ಮತ್ತು 6.ಲಕ್ಷ ರೂ ನಗದು ಹಣ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ರಾಮಪುರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿತ್ತು.
ಚಿನ್ನಾಭರಣ ಮತ್ತು ಲಕ್ಷಾಂತರ ರೂ. ನಗದು ಹಣ ಪ್ರಕರಣ ದಾಖಲಿಸಿರುವ ರಾಮಾಪುರ ಪೆÇಲೀಸ್ ಠಾಣಾ ಅಧಿಕಾರಿಗಳು ತನಿಖೆ ಕೈಗೊಂಡು. ದೂರು ನೀಡಿದ್ದ ಚಿನ್ನಮ್ಮ ಎಂಬುವರ ತಮ್ಮ ಕುಮಾರ ಎಂಬುವನೇ ಕಳ್ಳತನ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಿದ ಪೆÇೀಲೀಸ್ ರು ಆರೋಪಿಯನ್ನು ಬಂಧಿಸಿದ್ದಾರೆ.
ನಾಲ್ ರೋಡ್ ಗ್ರಾಮದ ಚಿನ್ನಮ್ಮ ರವರ ಮನೆಯಲ್ಲಿ ದಿನಾಂಕ 27/07/2023 ರಂದು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿ ಕುಮಾರ (37) ಬಿನ್ ಗೋವಿಂದನ್ ಈತನನ್ನು ರಾಮಾಪುರ ಪೆÇಲೀಸ್ ರವರು ಬಂಧಿಸಿ ಆತನಿಂದ ಕಳುವಾಗಿದ್ದ 150 ಗ್ರಾಂ ಚಿನ್ನ ಮತ್ತು 6 ಲಕ್ಷ ರೂ ನಗದನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ರಾಮಾಪುರ ಪೆÇಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಪಿ.ಎಸ್.ಐ ರಾದ, ಎ.ಎಸ್.ಐ ಗುರುಸ್ವಾಮಿ, ಮುಖ್ಯ ಪೇದೆಗಳಾದ ಸಿದ್ದೇಶ್ ಕುಮಾರ್, ಗಿರೀಶ್, ಮಂಜು, ಲಿಯಾಕತ್ ಅಲಿಖಾನ್, ಪರಶುರಾಮ್, ಮಹೇಂದ್ರ, ನಾಗೇಂದ್ರ, ಬಿರಾದರ್, ಪರಶುರಾಮ್ ಅವರು ಭಾಗಿಯಾಗಿದ್ದರು.