ಕಳವು ಪ್ರಕರಣದಲ್ಲಿ ಆರೋಪಿ, ಮಾಲು ಪತ್ತೆ

ಕೆಜಿಎಫ್.ಡಿ೩೦:ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಉರಿಗಾಂ ವೃತ್ತದ ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಗಲು ಕನ್ನ ಕಳುವು ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ಅವರಿಂದ ಸುಮಾರು ೪೫ ಗ್ರಾಂ ತೂಕದ ಸುಮಾರು ೨,೭೦,೦೦೦/- ರೂಗಳ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಉರಿಗಾಂ ವೃತ್ತದ ವಿಶೇಷ ಅಪರಾಧ ಪತ್ತೆ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಉರಿಗಾಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ. ೨೩ ರಂದು ಹಗಲಿನಲ್ಲಿ ನಡೆದಿದ್ದ ಮನೆ ಕಳುವು ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲು ಸಿ.ಪಿ.ಐ ಎಸ್.ಟಿ. ಮಾರ್ಕೊಂಡಯ್ಯ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು.
ಆರೋಪಿ ಮತ್ತು ಕಳುವಾದ ಮಾಲುಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಪ್ರಭು, ಕೆ.ಜಿ.ಎಫ್ ಎಂಬುವರನ್ನು ಬಂಧಿಸಿ, ಅವರಿಂದ ಸುಮಾರು ೪೫ ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಒಟ್ಟು ಮೌಲ್ಯ ಸುಮಾರು ೨,೭೦,೦೦೦/-ರೂಗಳು (ಎರಡು ಲಕ್ಷ ಎಪ್ಪತ್ತು ಸಾವಿರ ರೂಪಾಯಿಗಳು ಮಾತ್ರ) ಬೆಲೆ ಬಾಳುವುದನ್ನು ವಶಪಡಿಸಿಕೊಂಡಿರುತ್ತಾರೆ.
ಆರೋಪಿಯನ್ನು ಬಂಧಿಸಿ, ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉರಿಗಾಂ ಸಿ.ಪಿ.ಐ. ಎಸ್.ಟಿ. ಮಾರ್ಕೊಂಡಯ್ಯ, ಸಿಬ್ಬಂದಿಗಳಾದ ಜಬೀರ್‌ಪಾಷ, ರಾಮಕೃಷ್ಣಾರೆಡ್ಡಿ, ರಮೇಶ್ ಜಂಬಗಿ ರವರುಗಳನ್ನೊಳಗೊಂಡ ಅಪರಾಧ ಪತ್ತೆ ತಂಡವು ಯಶಸ್ವಿಯಾಗಿದ್ದು, ಈ ಯಶಸ್ವಿ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.