ಕಳಪೆ ರಸ್ತೆ ಕಾಮಗಾರಿ ಬಿಲ್ ತಡೆಹಿಡಿಯಲು ಒತ್ತಾಯ

ರಾಯಚೂರು. ಏ.೨೩- ತಿಮ್ಮಾಪೂರಪೇಟೆಯಲ್ಲಿ ಕಳಪೆ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಿ ಬಿಲ್ ತಡೆಹಿಡಿಬೇಕೆಂದು ಒತ್ತಾಯಿಸಿ ತಿಮ್ಮಾಪೂರಪೇಟೆ ಹಿತ ರಕ್ಷಣ ಸಮಿತಿ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ವಾರ್ಡ್ ನಂ ೧೬ ರ ರಾತ್ರಿಯ ಶ್ರೀ ತಿಮ್ಮಪ್ಪ ದೇವಸ್ಥಾನದಿಂದ ಕಾಮಪ್ಪದ ಶ್ರೀ ಬಾಲ ಅಂಜನೇಯ ಸ್ವಾಮಿ ದೇವಸ್ಥಾನ ವರೆಗೆ ರಸ್ತೆ ಕಾಮಗಾರಿ ಕೈಗೊಂಡಿದ್ದು ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು ಸಂಪೂರ್ಣ ಕಳಪೆ ಕಾಮಗಾರಿ ನಿರ್ವಹಿಸಲಾಗುತ್ತಿದ್ದು ಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
ತಿಮ್ಮಾಪೂರಪೇಟೆಯಲ್ಲಿ ಯುಜಿಡಿ ಪೈಪ್‌ಲೈನ್ ಕಾಮಗಾರಿಗೆ ಚಾಲನೆಯಲ್ಲಿ ಇಲ್ಲ ಯುಜಿಡಿ ಪೈಪ್‌ಲೈನ್ ಮತ್ತು ೨೪*೭ ನೀರಿನ ಪೈಪ್‌ಲೈನ್ ಕಾಮಗಾರಿ ಮುಗಿದ ನಂತರ ರಸ್ತೆ ಕಾಮಗಾರಿ ಪ್ರಾರಂಭ ಮಾಡಬೇಕು. ಮನೆಗಳು ತಗ್ಗು ಪ್ರದೇಶಗಳಲ್ಲಿರುವುದರಿಂದ ಈ ರಸ್ತೆಯನ್ನು ಈಗಾಗಲೇ ನಿರ್ಮಿಸಿದ ಹಳೆಯ ರಸ್ತೆಯನ್ನು ತೆರವುಗೊಳಿಸದೆ ಅದರ ಮೇಲೆ ನಿರ್ಮಿಸುತ್ತಿದ್ದಾರೆ. ಯುಜಿಡಿ ಕುಡಿಯುವ ನೀರು ಸೇರಿದಂತೆ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಸರ್ಕಾರದಿಂದ ಬಂದ ಹಣವನ್ನು ಲೂಟಿ ಮಾಡುವ ದುರುದ್ವೇಶದಿಂದ ಈ ಕಾಮಗಾರಿ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ್ದರು.
ಈ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ಜನರಿಗೆ ತೊಂದರೆಯಾಗುವಂತೆ ನಿರ್ಮಿಸಬೇಕು. ಇಲ್ಲವಾದಲ್ಲಿ ಇಂದಿನ ದಿನಗಳಲ್ಲಿ ಬಡಾವಣೆಯ ನಿವಾಸಿಗಳೊಂದಿಗೆ, ನಗರ ಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ದೊಡ್ಡ ನರಸಿಂಗಪ್ಪ, ಕೆಟಿ ಆನಂದ, ಕುರ್ಡಿ ನರಸಪ್ಪ, ಗುರುಶಂಕರ, ಗಡಗುಲ್ ಸೂರಿ, ಈರಣ್ಣ, ಶರಣಪ್ಪ, ಮಹಾದೇವ ನಾಯಕ,ಉಟ್ಕೂರು ರಮೇಶ, ಮಾಸ್ಟರ್ ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.