ಕಳಪೆ ರಸ್ತೆ ಕಾಮಗಾರಿ ಗ್ರಾಮಸ್ಥರ- ಆಕ್ರೋಶ

(ದೇವಪ್ಪ ಹಂಚಿನಾಳ)
ಗಬ್ಬೂರು.ಏ.೨೬-ದೇವದುರ್ಗ ತಾಲೂಕಿನ ಹೀರೆರಾಯಕುಂಪಿ ಗ್ರಾಮದಿಂದ ಮಶಿಹಾಳ ಗ್ರಾಮದವರೆಗೆ ಮಾಡುತ್ತಿರುವ ಡಾಂಬರೀಕರಣ ಕಾಮಗಾರಿ ತುಂಬಾ ಕಳಪೆ ಮಟ್ಟದಿಂದ ಕಾಮಗಾರಿಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಭೀಮರಾಯ ಜರದಬಂಡಿ ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಥಮ ಗುತ್ತಿಗೇದಾರನಾದ ಹನುಮಗೌಡ ಬಿರನಕಲ್ ಅವರು ಕಳಪೆ ಕಾಮಗಾರಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಇಂಜಿನೀಯರಾದ ಅಶೋಕ ರಡ್ಡಿ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿವರಾಜ ತಿಳಿಸಿದರು.
ಹಿರೇರಾಯಕುಂಪಿ ಗ್ರಾಮದಲ್ಲಿ ಕೆಬಿಜೆಎನ್ ಯೋಜನೆಯಲ್ಲಿ ಹೊನ್ನಕುಣಿ ವಿಭಾಗದ ನೀರಾವರಿ ಇಲಾಖೆ ಕೈಗೊತ್ತಿಕೊಂಡಿರುವ ೪ ಕೋಟಿ ೭೦ ಲಕ್ಷ ರೂ.ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಯಲ್ಲಿ ಕೃಪೆಯಿಂದ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ರಸ್ತೆ ಚರಂಡಿ ಸೇರಿದಂತೆ ಯಾವುದೇ ಕಾಮಗಾರಿಗಳನ್ನು ನಡೆಸಬೇಕಾದರೆ ಅಂದಾಜು ಪಟ್ಟಿ ತಯಾರಿಸಲಾಗುತ್ತದೆ. ಗುತ್ತಿಗೆದಾರ ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಮುಲಾಜಿಲ್ಲದೆ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸಂಬಂಧಿಸಿದ ಅಧಿಕಾರಿ ಕ್ರಮವಹಿಸಬೇಕು ಎಂದರು.
ಎಇ ಅಶೋಕ ರಡ್ಡಿರವರಿಗೆ ಖಡಕ್ ಎಚ್ಚರಿಕೆ:
ರಸ್ತೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಸಾಗುತ್ತಿರುವುದನ್ನು ಖುದ್ದಾಗಿ ನೋಡಿದ ಆಮ್ ಆದ್ಮಿ ಮುಖಂಡ ಸ್ಥಳದಲ್ಲಿಯೇ ದೂರವಾಣಿ ಕರೆ ಮಾಡಿ ಚಳಿ ಬಿಡಿಸಿದರು. ಗುತ್ತಗೆದಾರ ನಿಯಮಾನುಸಾರ ಕಾಮಗಾರಿ ಮಾಡುತ್ತಿಲ್ಲ, ಗುಣಮಟ್ಟದ ಗ್ರಾವಲ್ ಮತ್ತು ಜೆಲ್ಲಿ,ಮರಂ ಬಳಿಸಿಲ್ಲ ಇದರ ಬಗ್ಗೆ ಗಮನ ಹರಿಸಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ನಿಮ್ಮ ಮೇಲೆ ಕ್ರಮ ಜರುಗಿಸಲು ದೂರು ನೀಡುತ್ತೇನೆ ಎಂದು ಎಚ್ಚರಿಸಿದರು. ಸಾಮಾಜಿಕ ಕಾರ್ಯಕರ್ತ ಶಿವರಾಜ ಮಾತನಾಡಿ ರಸ್ತೆ ನಿರ್ಮಾಣಕ್ಕೆ ೬ಇಂಚು ದಪ್ಪ ಜೆಲ್ಲಿ ಹಾಕಬೇಕು ಆದರೆ ಗುತ್ತಿಗೆದಾರ ೨ಇಂಚು ಜೆಲ್ಲಿ ಹಾಕಿ ಕಾಮಗಾರಿ ನಡೆಸುತ್ತಿದ್ದಾನೆ. ಇದರ ಬಗ್ಗೆ ಜೆ.ಇ ಅಶೋಕ ರಡ್ಡಿ ಅವರ ಗಮನಕ್ಕೆ ತಂದರೆ ನಿಮಗೆ ಕ್ರಿಯಾ ಯೋಜನೆ ತೊರಿಸಿ ಕೆಲಸ ಮಾಡುವ ಅವಶ್ಯಕತೆ ಇಲ್ಲ, ನೀವು ಏನೆ ಕೇಳಬೇಕಾದರು ಮಾಹತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿ ಎಂದು ನಮ್ಮನ್ನೆ ಗದುರಿಸುವ ಮೂಲಕ ರಾಜರೋಷವಾಗಿ ಗುತ್ತಿಗೆದಾರ ಮನುಮಗೌಡನ ಪರವಾಗಿ ನಿಂತಿದ್ದಾನೆ ಎಂದು ಆಪಾದಿಸಿದರು.