ಕಳಪೆ ರಸ್ತೆ ಇಬ್ಬರು ಇಂಜಿನಿಯರ್‌ಗಳು ಅಮಾನತು

ಬೆಂಗಳೂರು, ಜು.೨೨- ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ವೇಳೆ ಕಂಡುಬಂದಿದ್ದ ಕಳಪೆ ರಸ್ತೆ ಪ್ರಕರಣ ಸಂಬಂಧ ಇಬ್ಬರು ಬಿಬಿಎಂಪಿ ಇಂಜಿನಿಯರ್ ಗಳನ್ನು ಅಮಾನತು ಮಾಡಲಾಗಿದೆ.
ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಹಕ ಅಭಿಯಂತರರಾದ ಎ.ರವಿ, ವಿಶ್ವಾಸ್ ಐ.ಕೆ ಸಹಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕಳಪೆ ರಸ್ತೆ, ಗುಣಮಟ್ಟ ಇಲ್ಲದ ಕಾಮಗಾರಿ ಸಂಬಂಧಿಸಿದಂತೆ ಮಾಧ್ಯಮಗಳ ಸುದ್ದಿ ಆಧಾರದ ಮೇಲೆ ತನಿಖೆ ಕೈಗೆತ್ತಿಕೊಂಡಿದ್ದ ಬಿಬಿಎಂಪಿ ಹಿರಿಯ ಅಧಿಕಾರಿಗಳು, ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನೂ, ಪ್ರಧಾನಿ ಕಚೇರಿಯಿಂದಲೂ ವರದಿ ಕೇಳಿದ್ದ ಹಿನ್ನಲೆ.ಸ್ಥಳಕ್ಕೆ ಹೋಗಿ ಗುಣಮಟ್ಟ ಪರಿಶೀಲನೆ ನಡೆಸಲಾಯಿತು. ಈ ವೇಳೆ ಕಳಪೆ ಕಾಮಗಾರಿ ಮಾಡಿರುವುದು ರೂಜುವಾಗಿತ್ತು. ಪ್ರಮುಖವಾಗಿ ೪೦ ಎಂ.ಎಂ ಡಾಂಬರೀಕರಣ ಮಾಡಬೇಕಿದ್ದ ಜಾಗದಲ್ಲಿ, ೩೦ ಎಂ.ಎಂ ರಸ್ತೆ ಡಾಂಬರೀಕರಣ ಆಗಿತ್ತು. ತನಿಖೆ ವೇಳೆ ಕಳಪೆ ಕಾಮಗಾರಿ ಪತ್ತೆ ಹಿನ್ನೆಲೆ ವರದಿ ಆಧರಿಸಿ ಇಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.