ಕಳಪೆ ಮಲ್ಚಿಂಗ್ ಪೇಪರ್-ಕ್ರಮಕ್ಕೆ ಆಗ್ರಹ

ಕೋಲಾರ,ಜು.೨೯:ರೈತರಿಗೆ ಕಳಪೆ ಮಲ್ಚಿಂಗ್ ಪೇಪರ್ ಡ್ರಿಪ್ ವಿತರಣೆ ಮಾಡಿ ಬಿಲ್ ನೀಡದೆ ವಂಚನೆ ಮಾಡುತ್ತಿರುವ ಕಂಪನಿ ಹಾಗೂ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡುವಂತೆ ರೈತ ಸಂಘದಿಂದ ಕಳಪೆ ಪೇಪರ್ ಡ್ರಿಪ್ ಸಮೇತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಿ ಅಪಾರ ಜಿಲ್ಲಾಧಿಕಾರಿ ಡಾ.ಸ್ನೇಹ ಮನವಿ ನೀಡಿ ಆಗ್ರಹಿಸಲಾಯಿತು.
ಜಿಲ್ಲಾಡಳಿತಕ್ಕೆ ಕೂಗಳ್ಳತೆ ದೂರದಲ್ಲಿರುವ ಟಮಕ ಕೈಗಾರಿಕಾ ಪ್ರದೇಶದಲ್ಲಿ ರೈತರಿಗೆ ಡ್ರಿಪ್ ಮಲ್ಚಿಂಗ್ ಪೇಪರ್ ನೀಡುವ ಕಂಪನಿ ಹಾಗೂ ಅಂಗಡಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ರೈತರು ಖರೀದಿ ಮಾಡುವ ಯಾವುದೇ ವಸ್ತುವಿಗೆ ಬಿಲ್ ನೀಡದೆ ವಂಚನೆ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವುದಕ್ಕೆ ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಆಕ್ರೋಷ ವ್ಯಕ್ತಪಡಿಸಿದರು.
ಪೂರ್ವಜರ ಕಾಲದ ಕೃಷಿ ಕ್ಷೇತ್ರ ಕಣ್ಮರೆಯಾಗಿ ಆದುನಿಕತೆ ಹೆಚ್ಚಾದಂತೆ ಕೃಷಿ ಮಾಡಲು ಭೂಮಿಗೂ ಪೇಪರ್ ಒದಿಕೆ ಮಡುವ ಮುಖಾಂತರ ಕೃಷಿ ಮಾಡಬೇಕಾದ ಮಟ್ಟಕ್ಕೆ ಬಹುರಾಷ್ಟೀಯ ಕಂಪನಿಗಳು ವಿತರಣೆ ಮಾಡುವ ಗೊಬ್ಬರ ಕೀಟನಾಶಕಗಳಿಂದ ಕೃಷಿ ಭೂಮಿ ಸಂಪೂರ್ಣವಾಗಿ ಬರುಡಾಗುವ ಬೀತಿಯಲ್ಲಿ ರೈತರಿದ್ದಾರೆ. ಭೂಮಿಯ ಫಲವತ್ತತೆಯ ನೆಪವನ್ನೇ ಇಟ್ಟುಕೊಂಡು ಗಲ್ಲಿಗೊಂದು ಮಲ್ಚಿಂಗ್ ಪೇಪರ್ ಡ್ರಿಪ್ ಕಂಪನಿಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ರೈತರಿಗೆ ಅವಶ್ಯಕತೆ ಇರುವ ಕೃಷಿ ಸಾಮಗ್ರಿಗಳ ಮಾರಾಟ ಮಾಡುವ ಮಾಲೀಕರು ತಮಗೆ ಇಷ್ಟ ಬಂದ ರೀತಿ ಬೆಲೆ ನಿಗದಿ ಮಾಡುತ್ತಿದ್ದರೂ ಅದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮರೆಯಾಗಿ ಕಂಪನಿಗಳ ಪರ ಕೆಲಸ ಮಾಡುತ್ತಿದ್ದಾರೆಂದು ಆರೋಪ ಮಾಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕಿರಣ್, ಮುನಿಯಪ್ಪ, ಸಂದೀಪ್, ಸುರೇಶ್, ಕಿರಣ್, ವೇಣು, ವಿಭಾಗೀಯ ಕಾರ್ಯದರ್ಶಿ ಪಾರುಕ್‌ಪಾಷ, ಬಂಗಾರಿ ಮಂಜು, ಬಾಸ್ಕರ್, ಸುನಿಲ್ , ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ನಾರಾಯಣಗೌಡ, ಮಾಸ್ತಿ ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟರ್, ಶ್ರೀನಿವಾಸ್, ಚಂದ್ರಪ್ಪ, ಮುಂತಾದವರು ಇದ್ದರು.