ಕಳಪೆ ಮಟ್ಟದ ಕಾಮಗಾರಿ: ಕ್ರಮಕ್ಕೆ ಆಗ್ರಹ

ರಾಯಚೂರು, ಮಾ.೩೧- ತಾಲೂಕಿನ ಅಪ್ಪನದೊಡ್ಡಿಯಿಂದ ಯರಗುಂಟಾರವರೆಗೆ ಬಿ.ಟಿ , ಮತ್ತು ಎಸ್.ಟಿ.ಬಿ.ಸಿ ಡಾಂಬರೀಕರಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಗುತ್ತೆದಾರ ಬಿಲ್ಲುಗಳನ್ನು ತಕ್ಷಣ ತಡೆಹಿಡಿದು ಕಪ್ಪು ಪಟ್ಟಿಗೆ ಸೇರಿಸಿ,ಕಿರಿಯ ಅಭಿಯಂತರರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಮನವಿ ಸಲ್ಲಿಸಿ ಒತ್ತಾಯಿಸಿದರು.
ರಾಯಚೂರು ತಾಲೂಕಿನ ಕಾಮಗಾರಿಗೆ ಲಕ್ಷಗಟ್ಟಲೇ ಹಣ ಮಂಜೂರಿಯಾಗಿ ಸಾರ್ವಜನಿಕ ಅನುಕೂಲಕ್ಕಾಗಿ ವಾಹನಗಳು ತಿರುಗಾಡಲು ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ ಆದರೆ ಕಾಮಗಾರಿಯನ್ನು ಗುತ್ತಿಗೆದಾರನು ತೀರಾ ಕಳಪೆ ಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸುತಿದ್ದರೆ ಎಂದು ದೂರಿದರು.
ಕಾಮಗಾರಿಗೆ ಬಳಸಿರುವ ಡಾಂಬರು ಕಳಪೆ ಮಟ್ಟದಿಂದ ಕೂಡಿದ್ದು. ಬಿ.ಟಿ. ಮತ್ತು ಎಸ್.ಟಿ.ಜಿ.ಸಿ ಕಾಮಗಾರಿ ಸಂಪೂರ್ಣ ಕಿತ್ತು ಹೋಗಿದೆ ಎಂದು ಆರೋಪಿಸಿದರು.
ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯಲೋಪ ಎಸಗಿರುವ ಕಿರಿಯ ಅಭಿಯಂತರ ರನ್ನು ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಣ್ಣ ಈರಪ್ಪ ಗಣಮೂರು, ಚನ್ನಬಸವ, ಲಕ್ಷ್ಮಣ, ಶರಣಪ್ಪ ದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.