ಕಳಪೆ ಬೀಜ ಮಾರಾಟಕ್ಕೆ ಅವಕಾಶ ನೀಡದಿರಲು ಸೂಚನೆ

ಬ್ಯಾಡಗಿ,ಜೂ3: ಕೃಷಿಯೇ ದೇಶದ ಜನರ ಜೀವಾನಾಧಾರವಾಗಿದ್ದು ರೈತರು ನಡೆಸುವ ಸ್ವಾವಲಂಬಿ ಕೃಷಿ ವ್ಯವಸ್ಥೆಯಿಂದ ಭಾರತದ ಅಭಿವೃದ್ಧಿ ಪ್ರಾರಂಭವಾಗುತ್ತದೆ ಹೀಗಾಗಿ ಯಾವುದೇ ಕಾರಣಕ್ಕೂ ಕಳಪೆ ಬೀಜ ಔಷಧ ಮಾರಾಟಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಲು ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ವತಿಯಿಂದ ರೀಯಾಯಿತಿ ದರ ದಲ್ಲಿ ಬೀಜ ಮಾರಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶಕ್ಕೆ ಅನ್ನ ನೀಡುವುದಷ್ಟೇ ಅಲ್ಲ ಕೃಷಿ ಮತ್ತು ಹೈನು ಗಾರಿಕೆ ದೇಶದ ಆರ್ಥಿಕ ಚಟುವಟಿಕೆಗಳನ್ನು ಉತ್ತಮಗೊಳಿಸುವ ಸುಲಭ ಮಾರ್ಗವಾಗಿದೆ ಆರಂಭದ ದಿನಗಳಲ್ಲಿ ಜೀವನಾ ಧಾರದ ಉದ್ದೇಶದಿಂದ ಪ್ರಾರಂಭವಾದ ಕೃಷಿಯು ಬಳಿಕ ಪರಿಣಾಮಕಾರಿಯಾಗಿ ವಾಣಿಜ್ಯ ವಹಿವಾಟಾಗಿ ಪರಿವರ್ತನೆಗೊ ಂಡಿದ್ದು ಇದರಿಂದ ಕೈಗಾರಿಕಾಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತ ಸಾಗಿದೆ ಎಂದರು.
ಮುಖಂಡ ಎಸ್.ಆರ್.ಪಾಟೀಲ ಮಾತನಾಡಿ, ಹಸಿರುಕ್ರಾಂತಿ ಘೋಷಣೆಗೂ ಮೊದಲು ದೇಶದಲ್ಲಿ ಬೆಳೆಯುತ್ತಿರುವ ಜನ ಸಂಖ್ಯೆಗೆ ಅನುಗುಣವಾಗಿ ಕೃಷಿಕರು ಆಹಾರೋತ್ಪಾದನೆಯಲ್ಲಿ ತೊಡಗಿದ್ದರು, ಜನಸಂಖ್ಯೆ ಹೆಚ್ಚಾದಂತೆ ಸಾಮಾನ್ಯ ಕೃಷಿ ಯಿಂದ ಇದು ಸಾಧ್ಯವಿಲ್ಲ ಎಂದು ತಿಳಿದು ಹಸಿರುಕ್ರಾಂತಿ ಘೋಷಣೆಗೊಂಡು ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಗೆ ಮುಂದಾಗಬೇಕಾಯಿತು, ಈ ಎಲ್ಲ ಘಟನೆಗಳನ್ನು ಉದಾಹರಣೆಯಾಗಿಟ್ಟುಕೊಂಡು ಗುಣಮಟ್ಟದ ಗ್ಯಾರಂಟಿ ತಳಿಬೀಜಗಳನ್ನು ಮಾರಾಟ ಮಾಡುವ ಮೂಲಕ ಕೃಷಿಯನ್ನು ಸುಭದ್ರಗೊಳಿಸುವಂತೆ ಸಲಹೆ ನೀಡಿದರು.
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹಸಿರುಕ್ರಾಂತಿ ಘೋಷಣೆ ಭಾಗವಾಗಿ ದೇಶದೆಲ್ಲೆಡೆ ನೀರಾವರಿ ಸೌಲಭ್ಯ ಕಲ್ಪಿ ಸಲಾಯಿತು, ಕೃಷಿಯನ್ನು ನಮ್ಮ ಇಚ್ಚೆಯಂತೆ ನಡೆಸಲು ಅಥವಾ ಪರಿವರ್ತಿಸಲು ಹೆಚ್ಚಿನ ಇಳುವರಿ ನೀಡುವ ವಿವಿಧ ಬೀಜ ಗಳನ್ನು ಪರಿಚಯಿಸಲಾಯಿತು, ಆದರೆ ವ್ಯವಸ್ಥೆಯಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಲು ಅಧಿಕಾರಿಗಳು ಮತ್ತು ಸರ್ಕಾ ರದಲ್ಲಿ ಕೆಲವೊಂದು ಸುಧಾರಣೆಗಳು ಅಗತ್ಯವಿದ್ದು, ಅದರಲ್ಲಿ ಪ್ರಮುಖವಾಗಿ ಕಳಪೆ ಬೀಜ ಮಾರಾಟಗಾರರನ್ನು ಕಠಿಣ ಕಾನೂನು ಜಾರಿಗೊಳಿಸಿ ಕಡಿವಾಣ ಹಾಕುವ ಮೂಲಕ ಕೃಷಿ ಮತ್ತು ಕೃಷಿಕರನ್ನು ಉಳಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಬಸವರಾಜ ಸಂಕಣ್ಣನವರ ಸೇರಿದಂತೆ ಕಾಂಗ್ರೆಸ್ ಬ್ಯಾಡಗಿ ಬ್ಲಾಕ್ ಅಧ್ಯಕ್ಷ ದಾನಪ್ಪ ಚೂರಿ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ಶಿವನಗೌಡ ವೀರನಗೌಡ್ರ, ಸಹಾಯಕ ಕೃಷಿ ನಿರ್ದೇಶಕಿ ಶಾಂತಾಮಣಿ, ಬೀರಪ್ಪ ಬಣಕಾರ, ರಮೇಶ ಸುತ್ತಕೋಟಿ, ಶಂಭನಗೌಡ ಪಾಟೀಲ, ಮಾರುತಿ ಅಚ್ಚಿಗೇರಿ, ಡಿ.ಎಚ್.ಬುಡ್ಡನಗೌಡ್ರ, ಭಾಷಾಸಬ್ ದೊಡ್ಮನಿ, ಮಲ್ಲಿಕಾರ್ಜುನ ಕರಲಿಂಗಪ್ಪನವರ ಸೇರಿದಂತೆ ಇನ್ನಿತರರಿದ್ದರು.