ಕಳಪೆ ಬೀಜ: ಜಮೀನುಗಳಿಗೆ ಭೇಟಿ, ಪರಿಶೀಲನೆ


ಲಕ್ಷ್ಮೇಶ್ವರ, ನ 22: ತಾಲೂಕಿನ ಗೊಜನೂರು ಗ್ರಾಮದಲ್ಲಿ ರೈತರು ಕಳಪೆ ಹತ್ತಿ ಬೀಜಗಳನ್ನು ನೀಡಿ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು.
ಜಮೀನುಗಳಲ್ಲಿ ಹತ್ತಿಗಿಡ ಆಳೆತ್ತರ ಬೆಳೆದಿದ್ದರು ಹೂವು ಕಾಯಿ ಬಿಡದಿರುವುದರಿಂದ ರೈತರು ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿ ಬೀಜದ ಗುಣಮಟ್ಟವನ್ನು ಪರೀಕ್ಷಿಸಲು ಕೃಷಿ ವಿಜ್ಞಾನಿಗಳನ್ನು ಕರೆಸುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ರವಿವಾರ ಗೊಜನೂರು ಗ್ರಾಮಕ್ಕೆ ಕೃಷಿ ವಿಜ್ಞಾನಿಗಳು ಹತ್ತಿ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಬ್ರಮರಾಂಬ ಗುಬ್ಬಿಶೆಟ್ಟಿ, ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಪಿ.ಕೆ.ಹೊನ್ನಪ್ಪನವರ, ಎಸ್.ಬಿ.ಪಾಟೀಲ್, ರೈತರಾದ ನಾಗನಗೌಡ ಪಾಟೀಲ, ಕಂದಾಯ ನಿರೀಕ್ಷಕ ಬಿ.ಎಂ.ಕಾತ್ರಾಳ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.