ಕಳಪೆ ಕಾಮಗಾರಿ ವಿರೋಧಿಸಿ ಧರಣಿ

ಹುಬ್ಬಳ್ಳಿ,ಜೂ23 : ಹುಬ್ಬಳ್ಳಿ ಮಹತ್ಮಾ ಗಾಂಧಿಜೀ ಉದ್ಯಾನವನದಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ರೂ.ನಗರದ 26 ಕೋಟಿ 11 ಲಕ್ಷ ಕಳಪೆ ಕಾಮಗಾರಿ ಮಾಡಿದ್ದನ್ನು ವಿರೋಧಿಸಿ ಹಾಗೂ ತನಿಖೆಗೆ ಆಗ್ರಹಿಸಿ ಮಹಾತ್ಮಾ ಗಾಂಧೀಜಿ ಉದ್ಯಾನವನ ವೇದಿಕೆ ವತಿಯಿಂದ ಒಂದು ದಿನದ ಸಾಂಕೇತಿಕ ಧರಣಿಯನ್ನು ಮಿನಿ ವಿಧಾನಸೌಧದ ಬಳಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತರು, ಮಹಾತ್ಮಾ ಗಾಂಧೀಜಿ ಉದ್ಯಾನವನ ಮತ್ತು ಇಂಧಿರಾ ಗಾಜಿನ ಮನೆಯ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಉದ್ಯಾನವನ ಮತ್ತು ಇಂದಿರಾ ಗಾಜಿನ ಮನೆಯ ಒಟ್ಟು ವಿಸ್ತೀರ್ಣ 17 ಎಕರೆ 05 ಗುಂಟೆ ಅಭಿವೃದ್ಧಿಗಾಗಿ 26 ಕೋಟಿ 11 ಲಕ್ಷ ಖರ್ಚು ವೆಚ್ಚಗಳನ್ನು ಮಾಡಿದ್ದು, ಈ ಕಾಮಗಾರಿಯು ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಆರೋಪಿಸಿದ ಅವರು, ಸಾರ್ವಜನಿಕರ ತೆರಿಗೆ ಹಣ ಪೆÇೀಲಾಗುತ್ತಿರುವುದು ದುರಂತದ ಸಂಗತಿ ಎಂದರು.
ಉದ್ಯಾನವನದಲ್ಲಿನ ಪುಟಾಣಿ ರೈಲು ಉದ್ಘಾಟನೆ ಸಂದರ್ಭದಲ್ಲಿ ಅವಘಡ ಉಂಟಾಗಿದ್ದು, 1.76 ಕೋಟಿ ರೂ. ಕೇವಲ ತಗಡು ಹಾಗೂ ಮೇಲಿನ ಛಾವಣಿಗೆ ಬಣ್ಣ ಲೇಪನ ಮಾಡಿದ್ದಾರೆ, ಸ್ಕೇಟಿಂಗ್ ಮೈದಾನದ ಸುತ್ತಲೂ ಸ್ಟೀಲ್ ಗ್ರೀಲ್ ಮತ್ತು ಬಣ್ಣ ಲೇಪನ ಹೊಸದಾಗಿ ಕಾಮಗಾರಿ ಮಾಡದೇ ಬಣ್ಣ ಲೇಪನ ಮಾಡಿದ್ದಾರೆ, ಕಾರಂಜಿ ಈ ಪೂರ್ವದಲ್ಲಿ ಮಾಡಿದ್ದು, ಫಜಲ್ ಪಾರ್ಕಿಂಗ್ ಕಾಮಗಾರಿಗಾಗಿ ಮೀಸಲಾಗಿಟ್ಟ ರೂ. 4.59 ಕೋಟಿಗಳು ಈ ಕಾಮಗಾರಿಯು ಸಹ ಕಳಪೆ ಕಾಮಗಾರಿಯಿಂದ ಕೂಡಿದ್ದು ಈ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ತನಿಖೆಯಿಂದಾಗಿ ಕಳಪೆ ಕಾಮಗಾರಿಯಲ್ಲಿ ಆದ ಅವ್ಯವಹಾರ ಬಗ್ಗೆ ತನಿಖೆಯಿಂದ ಸತ್ಯಸತ್ಯತೆ ಹೊರಗೆ ಬರಲಿದ್ದು, ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಒಂದು ವೇಳೆ ಕ್ರಮ ಜರುಗಿಸದೇ ಇದ್ದಲ್ಲಿ ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಸಂಚಾಲಕರಾದ ಬಸವರಾಜ ತೇರದಾಳ, ಸಂಚಾಲಕಾರದ ಲಕ್ಷ್ಮಣ ಗಂಡಗಾಳೇಕರ, ಮೋಹನ್ ಹಿರೇಮನಿ, ರೇವಣಸಿದ್ದಪ್ಪ ಹುಬ್ಬಳ್ಳಿ ಇತರರು ಉಪಸ್ಥಿತರಿದ್ದರು.