ಕಳಪೆ ಕಾಮಗಾರಿ ಮೂರು ತಿಂಗಳಲ್ಲಿ ಹಾಳಾದ ರಸ್ತೆ

ಚಿಂಚೋಳಿ,ಜು.22- ತಾಲೂಕಿನ ನಿಡಗುಂದ ದಿಂದ ರುದ್ನೂರ್ ಗ್ರಾಮಕ್ಕೆ 5 ಕಿಮಿ ಕಚ್ಚಾ ರಸ್ತೆ ಮಾಡಿಸಿ ಕೇವಲ ಮೂರು ತಿಂಗಳ ಒಳಗೆ ಈ ಕಚ್ಚ ರಸ್ತೆ ಸಂಪೂರ್ಣ ಹಾಳಾಗಿದ್ದು, ಕಾಮಗಾರಿಯ ಕÀಳಪೆ ಗುಣಮಟ್ಟವೇ ಕಾರಣ ಎಂದು ಯುವ ರೈತ ಸುನೀಲ್ ಕಾಳಗಿ ಆರೋಪಿಸಿದ್ದಾರೆ,
ನಿಡಗುಂದ ಮತ್ತು ರುದ್ನೂರ್ ಗ್ರಾಮದ ರೈತರು ತಮ್ಮ ಹೊಲಕ್ಕೆ ಹೋಗಬೇಕಾದರೆ ರಸ್ತೆ ಇಲ್ಲದೇ ಹೋಲಗಳಿಗೆ ಹೋಗಬೇಕಾದರೆ ಬಹಳಷ್ಟು ತೊಂದರೆ ಆಗುತ್ತಿದ್ದ ಕಾರಣ ಎರಡು ಗ್ರಾಮದ ರೈತರು ಸೇರಿ ಸೇಡಂನ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರ, ಅವರಿಗೆ ರಸ್ತೆಯನ್ನು ಸುಧಾರಣೆ ಮಾಡಬೇಕೆಂದು ರೈತರು ಮನವಿ ಮಾಡಿದರು. ಹೀಗಾಗಿ ಶಾಸಕರು ನಿಡಗುಂದ ದಿಂದ ರುದ್ನೂರ್ ಗ್ರಮಕೆ 5 ಕಿಮಿ ಕಚ್ಚಾ ರಸ್ತೆ ರೈತರಿಗೆ ಅನುಕೂಲ ಆಗಲಿ ಎಂದು ಮಂಜೂರು ಮಾಡಿ ಕಚ್ಚಾ ರಸ್ತೆಯನ್ನು ನಿರ್ಮಾಣ ಮಾಡಿಸಿದ್ದಾರೆ ಆದರೆ ದೇವರು ಕೊಟ್ಟರೆ ಪೂಜಾರಿ ಕೊಡದಂತೆ ಈ ಕಾಮಗಾರಿ ಮೂರು ತಿಂಗಳ ಒಳಗೆ ರಸ್ತೆ ಕೊಚ್ಚಿ ಹಾಳಾಗಿದ್ದು, ಈ ಕಚ್ಚಾ ರಸ್ತೆ ಕಾಮಗಾರು ಸಂಪೂರ್ಣ ಕಳಪೆ ಮಟ್ಟದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತೇದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಬೇಕೆಂದು ಸುನಿಲ್ ನಿಡಗುಂದ, ಅವರು ಆಗ್ರಹಿಸಿದರೆ.
ಒಂದು ವೇಳೆ ಈ ಕಾಮಗಾರಿಯ ಗುತ್ತೇದಾರರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ರೈತರು ಪ್ರತಿಭಟನೆ ಮಾಡಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎರಡು ಗ್ರಾಮದ ರೈತರು ಎಚ್ಚರಿಕೆ ನೀಡಿದ್ದಾರೆ