ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಮಾಜಿ ಶಾಸಕರಿಂದ ಖಡಕ್ ವಾರ್ನಿಂಗ್

ಜಗಳೂರು.ಜು.24; ತಾಲ್ಲೂಕಿನ ಯರಲಕಟ್ಟೆ ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆ ಇಲಾಖೆ ವ್ಯಾಪ್ತಿಯಲ್ಲಿ 1.ಕೋಟಿ 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಡಾಂಬಾರು ರಸ್ತೆ ಸಂಪೂರ್ಣ ಕಳಪೆಯಾಗಿದ್ದು  ಗ್ರಾಮಸ್ಥರ ಕರೆಯ ಮೇರೆಗೆ ಮಾಜಿ ಶಾಸಕ ಹೆಚ್.ಪಿ.ರಾಜೇಶ್  ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸ್ಥಳದಲ್ಲಿಯೇ ಗುತ್ತಿಗೆದಾರ ವಿರುದ್ದ ತರಾಟೆ ತೆಗೆದುಕೊಂಡ ಪ್ರಸಂಗ ನಡೆಯಿತು.ಗ್ರಾಮಸ್ಥರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ರಾಜೇಶ್ ಇತ್ತೀಚಿಗೆ ಅಷ್ಟೆ ಕಾಮಗಾರಿ ಮುಗಿದಿದೆ ಆದರೆ ಸಂಪೂರ್ಣ ಕಳಪೆಯಾಗಿದ್ದು ಗುಣಮಟ್ಟದಿಂದ ಕೂಡಿಲ್ಲ ಜನರೇ ಕೈನಲ್ಲಿ ಕಿತ್ತುಹಾಕಿರುವುದು ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವಂತ ರಸ್ತೆಯನ್ನ ಪಂಚಾಯತ್ ರಾಜ್ ಇಲಾಖೆ ಮುಖಾಂತರ ಕ್ರಿಯಾ ಯೋಜನೆ ರೂಪಿಸಿಕೊಂಡು ತಾಂತ್ರಿಕ ಮುಂಜುರಾತಿ ಪಡೆದುಕೊಂಡಿರುವುದು ನಿಯಮ ಬಾಹಿರವಾಗಿದೆ  ಹಲವು ಕಾಮಗಾರಿಗಳಿಗೆ  ಒಬ್ಬನೇ ಗುತ್ತಿಗೆದಾರರಿಗೆ ನೀಡುವ ಮೂಲಕ  ಸರ್ಕಾರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಈ ಕಳಪೆ ಕಾಮಗಾರಿಗೆ ಸೂಕ್ತ ತನಿಖೆಯಾಗಬೇಕು ಇಂತಹ ಕಳಪೆ ಕಾಮಗಾರಿಗೆ ಶಾಸಕರೇ ನೇರ ಹೊಣೆಗಾರರು ಕ್ಷೇತ್ರದಲ್ಲಿ ಅಧಿಕಾರಿಗಳನ್ನ ಬಳಸಿಕೊಂಡು ವಿವಿಧ ಇಲಾಖೆಯಲ್ಲಿ ಹಣ ದುರ್ಬಳಕೆ‌ ಮಾಡಿಕೊಂಡಿದ್ದಾರೆ ಇದಕ್ಕೆ  ಉದಾಹರಣೆ ಈ‌ ರಸ್ತೆಯೇ ಸಾಕ್ಷಿ ನನಗೆ ಇರುವ ಮಾಹಿತಿಯಂತೆ ಕಾಮಗಾರಿಗೆ ಬಿಲ್ ಆಗಿಲ್ಲ ಎಂಬುದು ತಿಳಿದಿದೆ ಕೂಡಲೆ ಮರು ಡಾಂಬಾರಿಕರಣ  ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.ಕೆ.ಪಿ.ಸಿ.ಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ ಪಂಚಾಯತ್ ಇಂಜಿನಿಯರ್ ವಿಭಾಗದ ಎಇಇ  ಉತ್ತಮ ಅಧಿಕಾರಿ ಎಂದು ತಿಳಿದಿತ್ತು ಆದರೆ ಇಂತಹ ಕಳಪೆ ಕಾಮಗಾರಿಗೆ ಅವರೇಕೆ ಸಹಕಾರ ನೀಡಿದ್ದಾರೋ ಗೊತ್ತಿಲ್ಲ ಕ್ಷೇತ್ರದ ಹಲವು ಕಾಮಗಾರಿಗೆ ಒಬ್ಬನೇ ಗುತ್ತಿಗೆದಾರ ನಿರ್ವಹಿಸಿರುವುದರಿಂದ ಹಲವು ಗ್ರಾಮಗಳಲ್ಲಿ ಕಳಪೆ ಕಾಮಗಾರಿ ಮೇಲ್ನೋಟಕ್ಕೆ ಕಂಡು ಬಂದಿದೆ ಜನಪ್ರತಿನಿಧಿಗಳೇ ಎಲ್ಲಾ ಕಾಮಗಾರಿಗಳಲ್ಲಿ ಪಾಲುದಾರರಾಗಿದ್ದಾರೆ ಇದರಿಂದಲೇ ಪರಸಂಟೇಜ್ ರಾಜಕಾರಣ ಜಾಸ್ತಿಯಾಗಿ ಕೂಡಲೇ ರಸ್ತೆ ಸರಿಪಡಿಸದಿದ್ದಲ್ಲಿ ತಾಲ್ಲೂಕು ಮಟ್ಟದಲ್ಲಿ ಗ್ರಾಮಸ್ಥರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು  ಮಾರ್ಗದುದ್ದಕ್ಕೂ ಗ್ರಾಮಸ್ಥರೆ ರಸ್ತೆಯನ್ನ ಹಗೆದು ಹಗೆದು ತೋರಿಸುವ ಮೂಲಕ ಜನಪ್ರತಿನಿಧಿಗಳು  ಹಾಗು ಗುತ್ತಿದಾರರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತನಿಖೆ ನೆಡೆಸಲು ಧ್ವನಿ ಎತ್ತಬೇಕೆಂದು ಮಾಜಿ ಶಾಸಕರಲ್ಲಿ‌ ಮನವಿ ಮಾಡಿದರು ಈ ಸಂದರ್ಭದಲ್ಲಿ  ಗ್ರಾಮ ಪಂಚಾಯಿತಿ ಸದಸ್ಯರು‌ ಮುರಿಗೆಪ್ಪ, ಆಶಾ ಸುರೇಶ್ ಮಾಜಿ ತಾ.ಪಂ.ಅಧ್ಯಕ್ಷಯು.ಜಿ.ಶಿವಕುಮಾರ್ , ಮಾಜಿ ಸದಸ್ಯ ಬಸವರಾಜಪ್ಪ ಸ್ಥಳೀಯ ಮುಖಂಡರು ಹಾಲೇಶ್ ಶಿವಮೂರ್ತಿ ಅಡಿವೆಪ್ಪ , ಎನ್ ರಾಜಪ್ಪ , ಎಸ್.ಶಿವಣ್ಣ.ಎಲ್.ಮೂಗಪ್ಪಎನ್.ಹೆಚ್.ರಮೇಶ್ , ವಂದನಗೌಡ .ಕೆ.ಎನ್.ಬಸವರಾಜ್.ಹನುಮಂತಪ್ಪ , ಎಸ್ಟಿ ಘಟಕ ಅಧ್ಯಕ್ಷ .ಬಿ.ಲೋಕೇಶ್. ಎಸ್ಸಿ ಘಟಕ ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್. ಮರೇನಹಳ್ಳಿ ಶೇಖರಪ್ಪ ,ಹಲವರು ಇದ್ದರು