ಕಳಪೆ ಕಾಮಗಾರಿ: ಆರೋಪ


(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ.4: ಪಟ್ಟಣದ ಭಾನು ಮಾರ್ಕೆಟ್ ನಿಂದ ಹಾವಳಿ ಹನುಮಂತ ದೇವರ ದೇವಸ್ಥಾನ ವರೆಗಿನ ನಡೆದಿರುವ ರಸ್ತೆ ಕಾಮಗಾರಿ ಆರಂಭದಲ್ಲಿಯೇ ಕಳಪೆ ಕಾಮಗಾರಿಯಾಗಿದೆ ಎಂದು ಆರೋಪ ಕೇಳಿಬಂದಿದೆ.
ಬುಧವಾರ ಪ್ರಕಾಶ್ ಕುಂಚಗೇರಿ ಮಠ ನಾಗರಾಜ್ ಚಿಂಚಲಿ ಅವರು ರಸ್ತೆ ಕಾಮಗಾರಿ ಸ್ಥಳಕ್ಕೆ ಬಂದಾಗ ಗುತ್ತಿಗೆದಾರರು ಯೋಜನೆಯಲ್ಲಿರುವಂತೆ ಸಾಮಗ್ರಿಗಳನ್ನು ಬಳಸದೆ ಕಳಪೆಗೂಡ ಮಟ್ಟದ ಸಾಮಗ್ರಿಗಳನ್ನು ಬಳಸಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರಾಜ್ ಚಿಂಚಲಿ ಮತ್ತು ಪ್ರಕಾಶ್ ಕೊಂಚಿಗೇರಿ ಮಠ ಅವರುಗಳು ಹೇಳಿಕೆ ನೀಡಿ ಈ ಮೊದಲು ಪುರಸಭೆಯಿಂದ ಸಿಗ್ಲಿ ನಾಕಾದವರಿಗೆ ಕೈಗೊಂಡಿರುವ ರಸ್ತೆ ಅತ್ಯಂತ ಗುಣಮಟ್ಟದಾಗಿದ್ದು ರಸ್ತೆಗೆ ಕಡಿ ಮತ್ತು ಎಂ ಸ್ಯಾಂಡ್ ಬಳಸಿ ಗುಣಮಟ್ಟ ರಸ್ತೆಯನ್ನು ಮಾಡಿದ್ದಾರೆ ಆದರೆ ಈಗ ಕೈಗೊಂಡಿರುವ ಕಾಮಗಾರಿ ಗುತ್ತಿಗೆದಾರರು ಆರಂಭದಲ್ಲಿಯೇ ಯೋಜನೆಯಲ್ಲಿರುವ ವಸ್ತುಗಳನ್ನು ಬಳಸದೆ ಅಗೆದ ರಸ್ತೆಗೆ ಮಣ್ಣು ಮಿಶ್ರಿತ ಕಟ್ಟುಗ ಹಾಕಿ ರೋಲ್ ಮಾಡುತ್ತಿದ್ದು ಇದು ಕಳಪೆಗೆ ಸಾಕ್ಷಿಯಾಗಿದೆ.
ಆದ್ದರಿಂದ ಮುಖ್ಯ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಅಥವಾ ಯೋಜನಾ ನಿರ್ದೇಶಕರು ಭೇಟಿ ನೀಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗಣೇಶ್ ನೆಹರವಾಡಿ ಮಹೇಶ್ ಬೊಮ್ಮನಹಳ್ಳಿ ಶಿವಾನಂದ ಮೆಕ್ಕಿ ದೇವಣ್ಣ ರೋಣದ ಈಶ್ವರ ರೋಣದ ಇದ್ದರು.