ಕಳಪೆ ಕಾಮಗಾರಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತ್ತಿಗೆ ಧರಣಿ ಸತ್ಯಾಗ್ರಹ

ರಾಯಚೂರು.ಜು.೨೧- ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಿಗೆ ಸರಕಾರದಿಂದ ೮ ಕೋಟಿ ೬೦ ಲಕ್ಷ ಅನುದಾನದ ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ಕಳಪೆ ಮಟ್ಟದಲ್ಲಿ ಕೈಗೊಂಡಿರುವ ಅಧಿಕಾರಿಗಳನ್ನು
ಸೇವೆಯಿಂದ ಅಮಾನತು ಮಾಡುವಂತೆ ಡಾ.ಬಿ.ಆರ್ ಅಂಬೇಡ್ಕರ್ ಪ್ರಗತಿಪರ ಕಾರ್ಮಿಕ ಸೇವಾ ಸಂಘದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಗಾರ್ಡನ್ ನಲ್ಲಿ ಘೋಷಣೆ ಕೂಗುತ್ತ ಧರಣಿ ಸತ್ಯಾಗ್ರಹ ನಡೆಸಿದರು.
ಕಳಪೆ ಕಾಮಗಾರಿ ಕೈಗೊಂಡಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಇಲಾಖೆ ಉಪ ವಿಭಾಗ ವಿಶ್ವನಾಥರೆಡ್ಡಿ ಎಇಇ ಚಂಪರಾಜ ಚವ್ಹಾಣ ಪ್ರಶಾಂತ ವಲ್ಲಯಪುರ ಜೆ.ಇ. ರಾಘವೇಂದ್ರ ಜೆ.ಇ ಇವರನ್ನು ಸೇವೆಯಿಂದ ಅಮಾನಗೊಳಿಸುವಂತೆ ಒತ್ತಾಯ ಮಾಡಿದರು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಹಾಗೂ ನವೀಕರಣ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು, ಜೂ.೨೧ ರಂದು ಯಾದಗಿರಿ ಜಿಲ್ಲೆಗೆ ಸಂಬಂಧಿಸಿದ ೨೫ ಪಿಹೆಚ್ ಸಿ ಕಾಮಗಾರಿಗಳು ಹಾಗೂ ಜೂ.೨೨ ರಂದು ರಾಯಚೂರು ಜಿಲ್ಲೆಗೆ ಸಂಬಂಧಿಸಿದ ೧೮ ಪಿಹೆಚ್ ಸಿ ಕಾಮಗಾರಿಗಳ ಪರಿಶೀಲನೆಗೆ ಮುಖ್ಯ ಅಭಿಯಂತರರು ಆ ಕುಕ, ಇಂಜಿನೀಯರಿಂಗ್ ಘಟಕ ಬೆಂಗಳೂರು ಇವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು.
ಪಿಹೆಚ್‌ಸಿ ದುರಸ್ತಿ ಕಾಮಗಾರಿಗಳು ತನಿಖೆ ಮಾಡದೆ ಮರಳಿ ಹಿಂತಿರುಗಿರುತ್ತಾರೆ. ಸದರಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಿರುವುದು ನಮಗೆ ತೃಪ್ತಿಕರವಾಗಿರುವುದಿಲ್ಲ ಇದರಲ್ಲಿ ಕೋಟಿಗಟ್ಟಲೆ ಭ್ರಷ್ಟಾಚಾರ ನಡೆದಿರುವದು ಈಗಾಗಲೇ ಮೇಲೆ ತೋರಿಸಿದ ಉಲ್ಲೇಖಗಳ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ರೀತಿ ಕ್ರಮ ಕೈಗೊಳ್ಳುವದರಲ್ಲಿ ನಿರ್ಲಕ್ಷವಹಿಸಿ ಸಂಪೂರ್ಣವಾಗಿ ವಿಫಲವಾಗಿರುತ್ತಾರೆ ಹಾಗೂ ಸದರಿ ಅಧಿಕಾರಿಗಳ ಜೊತೆ ಶಾಮೀಲಾಗಿ ಸರಕಾರದಿಂದ ಬಂದ ಅನುದಾನವನ್ನು ದುರ್ಬಳಿಕೆ ಮಾಡಿಕೊಂಡಿರುವವರು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ಆರೋಪಿಸಿದರು.
ಮನವಿಯನ್ನು ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತು ಮಾಡಬೇಕೆಂದು ಒತ್ತಾಯಸಿದರು.
ಈ ಸಂದರ್ಭದಲ್ಲಿ ಭೀಮೇಶ, ವಿರೇಶ, ಭರತ್ ಭೀಮರಾಯ ಹಾಗೂ ನರಸಿಂಹಲು ಸೇರಿದಂತೆ ಉಪಸ್ಥಿತರಿದ್ದರು.