ಕಳಪೆ ಕಾಮಗಾರಿಗಳ ಬಗ್ಗೆ ಸಾರ್ವಜನಿಕರ ಆಕ್ರೋಶ

ಚಿತ್ರದುರ್ಗ.ಸೆ.೨೩; ನಗರದ ಅಲಿ ಮೊಹಲ್ಲಾ, ಬುರುಜನಹಟ್ಟಿ ಹತ್ತಿರ 6ನೇ ವಾರ್ಡ್ನಲ್ಲಿ  ನಡೆದ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಕಾರ್ಯಕ್ರಮದಡಿಯಲ್ಲಿ ಪ್ರಜಾ ಪ್ರತಿನಿಧಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ವಾರ್ಡ್ ಸಮಿತಿಗಳನ್ನು ರಚಿಸುವ ಬಗ್ಗೆ ವಿಸ್ತಾರವಾಗಿ ಸ್ಥಳೀಯ ಜನರೊಂದಿಗೆ ಚರ್ಚಿಸಲಾಯಿತು.
ಚಿತ್ರದುರ್ಗ ನಗರದಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿರುವುದು ಸಿದ್ದರಾಮಯ್ಯ ರವರು ಮುಖ್ಯಮಂತ್ರಿಗಳಾಗಿದ್ದಾಗ, ಆಂಜನೇಯ ರವರು ಸಚಿವರಾಗಿದ್ದಾಗ ಬಿಡುಗಡೆ ಮಾಡಿದ 200 ಕೋಟಿ ಹಾಗೂ ಬಿ. ಎನ್. ಚಂದ್ರಪ್ಪ ರವರು ಸಂಸದರಾಗಿದ್ದಾಗ 8 ಕೋಟಿ, ಸರ್ಕಾರದಿಂದ ಟೆಂಡರ್ ಕರೆಯುವುದು ವಿಳಂಬವಾದ ಕಾರಣ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಮಗಾರಿ ಆರಂಭಗೊAಡಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದೇ ಕಾಮಗಾರಿಗಳನ್ನು ಆರಂಭಿಸಿ ಬಿಜೆಪಿ ಸರ್ಕಾವೇ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿರುವಂತೆ ಬಿಂಭಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಹಣ ಕಾಂಗ್ರೆಸ್ ಸರ್ಕಾರದಲ್ಲಿದ್ದಾಗ ಬಿಡುಗಡೆಯಾಗಿರುವುದೇ ಹೊರತು ಬಿಜೆಪಿಯದ್ದಲ್ಲ, ಇದನ್ನು ತಿಪ್ಪಾರೆಡ್ಡಿ ಹಾಘೂ ಎ. ನಾರಾಯಣಸ್ವಾಮಿ ತನ್ನ ಶ್ರಮದಿಂದ ಕಾಮಗಾರಿಗಳು ನಡೆಯುತ್ತಿವೆ ಎಂಬAತೆ ಸುಳ್ಳು ಹೇಳಿಕೊಂಡು ತಿರುಗಾಡುವುದನ್ನು ಬಿಡಬೇಕು ಎಂದು ಷಣ್ಮುಖಪ್ಪ ರವರು ಆಗ್ರಹ ವ್ಯಕ್ತಪಡಿಸಿದರು.
ನಗರ ಬ್ಲಾಕ್ ಅಧ್ಯಕ್ಷರಾದ ಲಕ್ಷಿö್ಮಕಾಂತ್ ರವರು ಮಾತನಾಡುತ್ತಾ, ವಾರ್ಡ್ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ತರಬೇತಿ ನೀಡಿ ಚುನಾವಣೆಗಳು ಬಂದಾಗ ಸದರಿ ವಾರ್ಡ್ ಸಮಿತಿ ಪದಾಧಿಕಾರಿಗಳ ಮುಖಂತರ ಎಲ್ಲಾ ಚುನಾವಣೆಗಳನ್ನು ನಡೆಸುವಂತೆ ಕರೆ ನೀಡಿದರು.ಈ ಕಾರ್ಯಕ್ರಮದಲ್ಲಿ, ಡಿಸಿಸಿ ಪ್ರಧಾನಕಾರ್ಯದರ್ಶಿಗಳಾದ ಕೆ. ಪಿ. ಸಂಪತ್ ಕುಮಾರ್ ರವರು, ಹಸನ್ ತಾಹೀರ್, ಸಾಧಿಕ್, ಯೂಸುಫ್, ಕರಿಯಪ್ಪ, ಷರೀಫ್ ಹಾಗೂ ಸ್ಥಳೀಯ ;ಮುಖಂಡರು, ಕಾಯ್ಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.