ಕಳಪೆ ಕಾಮಗಾರಿ,ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ರಾಯಚೂರು,ಅ.೧೭- ಮಸ್ಕಿ ತಾಲೂಕಿನ ಅಮೀನಗಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಮೀನಗಡ ಸರಕಾರ ಪ್ರೌಢ ಶಾಲೆ ಭೋಜನಾಲಯ ಕಟ್ಟಡ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು,ಕೂಡಲೇ ಕಾಮಗಾರಿಯನ್ನು ಪರಿಶೀಲನೆ ಮಾಡಿ, ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ ಸೇನೆ ಸಂಘಟನಾ ಕಾರ್ಯದರ್ಶಿ ಚನ್ನಬಸವ ಅಮೀನಗಡ ಆಗ್ರಹಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಈ ವರೆಗೂ ಆಗಿರುವ ಕಾಮಗಾರಿಯಕ್ಕಿಂತ ಹೆಚ್ಚಿನ ಬಿಲ್ ಮೊತ್ತ ಮಂಜೂರಿಯಾಗಿದ್ದು, ಕಾಮಗಾರಿ ಮಾತ್ರ ಪೂರ್ಣವಾಗಿಲ್ಲ. ಈ ಕುರಿತು ಧರಣಿ ಮಾಡಿದಾಗ ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ಮತ್ತು ಕಾಮಗಾರಿ ಪರಿಶೀಲನೆ ಮಾಡಿ ಕಾಮಗಾರಿ ಕುರಿತಂತೆ ಕಳಪೆ ಕಾಮಗಾರಿ ಮತ್ತು ಅಗತ್ಯಕಿಂತ ಹೆಚ್ಚಿನ ಮೊತ್ತ ಪಾವತಿಯಾಗಿರುವ ಕುರಿತು ಸಿಇಓ ಅವರಿಗೆ ವರದಿ ಸಲ್ಲಿಸಿದರು ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಪಿಡಿಓ ಹಾಗೂ ತಾಂತ್ರಿಕ ಸಹಾಯಕ ನಫೀಯಾ ಬೇಗಂ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಹೆಚ್ಚಿನ ಬಿಲ್ ಮೊತ್ತ ಮರುಪಾವತಿ ಮಾಡಿಕೊಂಡು ಕಾಮಗಾರಿಗೆ ಪುನರ್ ಆದೇಶ ನೀಡಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಉಸ್ತುವಾರಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹೇಶ ಕುಮಾರ, ಕೆ.ಸಂತೋಷ, ಈ.ಕುಮಾರಸ್ವಾಮಿ, ಅಂಬಣ್ಣ ಮಲ್ಲಾಪೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.