ಕಳಪೆ ಔಷಧ- ಸಿಬಿಐ ತನಿಖೆಗೆ ಒತ್ತಾಯ

ನವದೆಹಲಿ, ಡಿ,೨೯- ರಾಷ್ಟ್ರ ರಾಜಧಾನಿಯ ಆಪ್ ನೇತೃತ್ವದ ಸರ್ಕಾರದಿಂದ ಕಳಪೆ ಗುಣಮಟ್ಟದ ಔಷಧಗಳ ಸರಬರಾಜು ಪ್ರಕರಣ ಕುರಿತಂತೆ ದೆಹಲಿಯ ವಿಚಕ್ಷಣ ನಿರ್ದೇಶನಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದೆ.ಕೇಂದ್ರ ಗೃಹ ಸಚಿವಾಲಯಕ್ಕೆ ಈ ಸಂಬಂಧ ಪತ್ರ ಬರೆದಿರುವ ವಿಚಕ್ಷಣಾಲಯ, ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ (ಜಿಎನ್‌ಸಿಟಿಡಿ) ಆಸ್ಪತ್ರೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಔಷಧಗಳ ಪೂರೈಕೆ ಮಾಡದೆ ಇರುವ ಕುರಿತು ವರದಿಯಾಗಿದೆ. ಈ ಬಗ್ಗೆ ತನಿಖೆ ಸಿಬಿಐಗೆ ವಹಿಸುವಂತೆ ಆಗ್ರಹಿಸಿದೆ.ದೆಹಲಿಯ ವಿಚಕ್ಷಣಾ ವಿಶೇಷ ಕಾರ್ಯದರ್ಶಿ ವೈವಿವಿಜೆ ರಾಜಶೇಖರ್, ಈ ಹಿಂದೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಸುಧಾಂಶ್ ಪಂತ್ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಗುಣಮಟ್ಟದ ಔಷದ ಬಳಕೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಇದೇ ವೇಳೆ ಔಷಧಗಳನ್ನು ತಕ್ಷಣಕ್ಕೆ ಹಿಂಪಡೆಯುವಂತೆ ಮತ್ತು ವಿರತಣೆ ನಡೆಸಿದ ಉತ್ಪಾದಕರು ಹಾಗೂ ಪೂರೈಕೆದಾರರ ವಿರುದ್ಧ ಅಗತ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ.ಈಗಾಗಲೇ ಮೊಹಲ್ಲಾ ಕ್ಲಿನಿಕ್ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಈ ಸಂಬಂಧ ೨೦೧೮ ರ ಫೆಬ್ರವರಿಯಲ್ಲಿ ಪ್ರಾಥಮಿಕ ತನಿಖೆ ಬಗ್ಗೆ ಕೂಡ ದಾಖಲಿಸಲಾಗಿದೆ. ಸಿಪಿಎ ಈ ಹಿಂದೆ ವಶಕ್ಕೆ ಪಡೆದಿದ್ದ ಔಷಧಿಗಳೇ ಇವು ಎಂಬ ಬಗ್ಗೆಯೂ ತನಿಖೆ ಆಗಬೇಕಿದೆ. ಅಲ್ಲದೇ ಇವುಗಳನ್ನೇ ಮೊಹಲ್ಲಾ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ವಿತರಿಸಲಾಗಿದೆಯಾ ಇಲ್ಲವಾ ಎಂಬುದನ್ನೂ ಗಮನಿಸಬೇಕಿದೆ ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.ಹೆಚ್ಚಿನ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದಿದ್ದಾರೆ.ಡಿಸೆಂಬರ್ ೨೩ರಂದು ದೆಹಲಿಯ ಲೆಪ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಕೂಡ ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮಾಣಿತ ಗುಣಮಟ್ಟದ ಔಷಧಗಳ ಪೂರೈಕೆ ವಿಚಾರವನ್ನು ಸಿಬಿಐಗೆ ವಹಿಸಬೇಕು ಎಂದು ಶಿಫಾರಸು ಮಾಡಿದ್ದರುಈಗ ದೆಹಲಿ ವಿಚಕ್ಷಣಾ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿಗೆ ಪತ್ರ ಬರೆದು ಗುಣಮಟ್ಟದ ಮಾತ್ರೆಗಳನ್ನು ವಶಕ್ಕೆ ಪಡಿಸಿಕೊಳ್ಳಬೇಕು, ಅಲ್ಲದೇ, ಈ ಔಷಧ ವಿತರಿಸಿದ ಕಂಪನಿಗಳಿಗೆ ಯಾವುದೇ ಪಾವತಿ ಮಾಡದಂತೆ ಆಗ್ರಹಿಸಿದ್ದರು.ಈ ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜಶೇಖರ್ ದೆಹಲಿ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ ಸಲ್ಲಿಸಿದ್ದ ಹಲವು ವರದಿಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಸರ್ಕಾರಿ ಅನುಮೋದಿತ ಖಾಸಗಿ ಪ್ರಯೋಗಾಲಯಗಳು ಈ ಔಷಧಗಳು ಗುಣಮಟ್ಟದಲ್ಲಿದ್ದ ಎಂಬ ಕುರಿತು ಸಲ್ಲಿಸಿದ ಇತರ ವರದಿಗಳನ್ನು ಸೇರಿಸಿದೆ.