ಕಳಪೆ ಅಡುಗೆ ಎಣ್ಣೆ ಮಾರಾಟ, ಕ್ರಮಕ್ಕೆ ಆಗ್ರಹ

ರಾಯಚೂರು.ಜ.೧೧- ಮಾನ್ವಿ ಪಟ್ಟಣದ ಗುರುರಾಜ ಆಯಿಲ್ ಮರ್ಚೆಂಟ್ ಅಂಗಡಿಯಲ್ಲಿ ಅನಧಿಕೃತವಾಗಿ ಕಳಪೆ ಗುಣಮಟ್ಟದ ಅಡುಗೆ ಎಣ್ಣೆ ಮಾರಾಟ ಮಾಡುತ್ತಿದ್ದಾರೆ ಎಂದು ಭಾರತೀಯ ಸೇವಾ ಸಮಿತಿಯ ಯುವ ಘಟಕದ ರಾಜ್ಯಾಧ್ಯಕ್ಷ ಹೆಚ್.ಎಂ.ಬಾಬು ಬೈಲ್ ಮರ್ಚೆಡ್ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿ, ಕಳಪೆ ಎಣ್ಣೆ ಮಾರಾಟ ಮಾಡುತ್ತಿರುವ ಬಗ್ಗೆ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ದೂರಿನ ಅನ್ವಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಕಳಪೆ ಎಣ್ಣೆ ಮಾರಾಟ ಮಾಡುತ್ತಿರುವು ಕಂಡು ಬಂದಿರುವುದರಿಂದ ಅವರಿಗೆ ಕೇವಲ ೫ ಸಾವಿರ ಹಣವನ್ನು ದಂಡ ಹಾಕಿ ಕೈತೊಳೆದು ಕೊಂಡಿರುವುದನ್ನು ನೋಡಿದರೆ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಅನುಮಾನ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ ಅವರು ತಪ್ಪಿತಸ್ಥರನ್ನು ರಕ್ಷಣೆ ಮಾಡುತ್ತಿರುವ ಮಾನ್ವಿ ತಾಲ್ಲೂಕು ಆಡಳಿತ , ಅಧಿಕಾರಿಗಳ ಮೇಲೆ ಹಾಗೂ ಸಂಬಂಧಿಸಿದ ಜಿಲ್ಲಾ ಅಂಕಿತ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಿ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ಸಂಚಾಲಕ ಶಿವಕುಮಾರ ಜಗ್ಲಿ, ಕೆ.ಶ್ರೀನಿವಾಸ್, ಮಿತಿನ್ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.