ಕಳಚಿದ ಹಿರಿ ತಲೆ ಮಾರಿನ ಕೊಂಡಿ: ಕಲಾವಿದೆ ಬಿ ಜಯಾ ನಿಧನ

ಬೆಂಗಳೂರು,ಜೂ.3- ಕನ್ನಡ ಚಿತ್ರರಂಗದಲ್ಲಿ ಸರಿಸುಮಾರು ಆರು ದಶಕಗಳ ಕಾಲ ನಟಿಯಾಗಿ ಪೋಷಕ ಕಲಾವಿದೆಯಾಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಬಿ.ಜಯಾ ಇಂದು ನಿಧನರಾಗಿದ್ದಾರೆ.

ಅವರಿಗೆ 75 ವರ್ಷ ವಯಸ್ಸಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಹೃದಯಾಘಾತವಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು ಇಂದು ಅವರು ನಿಧನರಾಗಿದ್ದಾರೆ ಈ ಮೂಲಕ ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಿದೆ.

ಕುಳ್ಳಿ ಜಯಾ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಬಿ.ಜಯಾ ಅವರು ಹಾಸ್ಯಚಕ್ರವರ್ತಿ ನರಸಿಂಹರಾಜು ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಆಗಿನ ಕಾಲದಲ್ಲಿ ಇಬ್ಬರ ಜೋಡಿ ಜನಪ್ರಿಯವಾಗಿತ್ತು.

ಸರಿಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಬಿ.ಜಯಾ, ಆರು ದಶಕಗಳ ಕಾಲ ಚಿತ್ರರಂಗದಲ್ಲಿ ನಾಯಕಿಯಾಗಿ ಹಾಸ್ಯ ಕಲಾವಿದೆಯಾಗಿ ಗೆಳತಿಯಾಗಿ ಕಾಣಿಸಿಕೊಂಡಿದ್ದ ಜಯ ಇನ್ನು ನೆನಪು ಮಾತ್ರ.

ಗೌಡ್ರು ಚಿತ್ರದ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದ ಬಿ.ಜಯ ಅವರು ಗಂಧದಗುಡಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳ ಮೂಲಕ ಜನಮಾನಸದಲ್ಲಿ ನೆಲೆಸಿದ್ದರು.

ವೃತ್ತಿ ರಂಗಭೂಮಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಿ.ಜಯ ಅವರು ರಂಗಭೂಮಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು.

ಕೊನೆಗಾಲದಲ್ಲಿಯೂ ನಟನೆ:

ಇತ್ತೀಚೆಗೆ ಧಾರಾವಾಹಿ ನಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊನೆಗಾಲದಲ್ಲಿ ನಟನೆಯನ್ನು ತನ್ನ ಉಸಿರಾಗಿಸಿಕೊಂಡಿದ್ದಾರೆ.

ಸದ್ಯ ಸರಸು ಧಾರವಾಹಿ ನಟಿಸುತ್ತಿದ್ದ ಅವರು ಪಾಪ ಪಾಂಡು ಧಾರವಾಹಿಯಲ್ಲಿ ನಟಿಸಿ ಗಮನಸೆಳೆದಿದ್ದರು. ಅವಿವಾಹಿತರಾಗಿ ಉಳಿದಿದ್ದ ಅವರು ಸಹೋದರನ ಮನೆಯಲ್ಲಿ ವಾಸ ಮಾಡುತ್ತಿದ್ದರು

ಸಂತಾಪ:

ಹಿರಿಯ ನಟಿ ಬಿ ಜಯ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ತೀವ್ರ ಸಂತಾಪ ಸೂಚಿಸಿದ ಕಳೆದುಕೊಂಡು ಚಿತ್ರರಂಗ ಬಡವಾಗಿದೆ ಎಂದು ಸೂಚಿಸಲಾಗಿದೆ