ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ …

ಕಲಬುರಗಿ,ಆ.2-ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ ಎರೆಯಲಾಗುತ್ತದೆ. ಅಂದರೆ ಪೌಷ್ಟಿಕ ಆಹಾರ ಮಣ್ಣುಪಾಲಾಗುತ್ತದೆ.
ಅದೇ ಹಾಲನ್ನು ಅವಶ್ಯಕತೆ ಇರುವವರಿಗೆ ಆಹಾರವಾಗಿ ನೀಡಬಹುದಲ್ಲವೇ ? ದೈವ ಭಕ್ತಿಗೂ, ಧರ್ಮ ಭಕ್ತಿಗೂ, ಪರಿಸರ ಭಕ್ತಿಗೂ, ಮಾನವೀಯತೆಗೂ ಇದರಿಂದ ಒಂದು ಅರ್ಥ ಬರುತ್ತದೆಯಲ್ಲವೇ ?
ಯೋಚಿಸುವ ಸರದಿ ನಮ್ಮದು.
ಒಂದು ಸಾಂಸ್ಕøತಿಕ ಹಬ್ಬವಾಗಿ ನಾಗರ ಪಂಚಮಿಗೆ ಯಾವುದೇ ವಿರೋಧವಿಲ್ಲ. ಹಬ್ಬಗಳು ನಮ್ಮ ಸಂಸ್ಕೃತಿಯ ಮತ್ತು ಬದುಕಿನ ಭಾಗಗಳು. ಅದನ್ನು ಆಚರಿಸುವುದು ಸಂಭ್ರಮಿಸುವುದು ಉತ್ತಮ ನಡವಳಿಕೆ. ಆದರೆ ಹಬ್ಬದ ಹೆಸರಿನಲ್ಲಿ ಮೌಡ್ಯ ಮತ್ತು ಆಹಾರ ವಸ್ತುಗಳ ವ್ಯರ್ಥವಾಗುವುದನ್ನು ತಡೆಯಬೇಕು ಮತ್ತು ಪರಿವರ್ತನೆ ಹೊಂದಬೇಕು. ಬದಲಾವಣೆ ಜಗದ ನಿಯಮ. ಅದೇ ಅರಿವು ಅದೇ ಶಿಕ್ಷಣ ಅದೇ ನಾಗರಿಕತೆ.
ಭಾರತದಲ್ಲಿ ಸುಮಾರು 80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂಬ ವರದಿಯಿದೆ. ಅಂತಹವರಿಗೆ ಹಾಲು ಎಷ್ಟು ಮುಖ್ಯ ಎಂಬುದನ್ನು ಒಮ್ಮೆ ಯೋಚಿಸಿ.
ಹೊಸ ಬಟ್ಟೆ, ಆರೋಗ್ಯಯುತ ಒಳ್ಳೆಯ ಊಟ, ಕುಟುಂಬದವರು ಮತ್ತು ಗೆಳೆಯರೊಂದಿಗೆ ಮಾತುಕತೆ, ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಒಂದಷ್ಟು ಒಳ್ಳೆಯ ಚಿಂತನೆ, ಸ್ವಲ್ಪ ವಿಶ್ರಾಂತಿ, ಮಕ್ಕಳಿಗೆ ಹಬ್ಬಗಳ ಹಿನ್ನೆಲೆ ಮತ್ತು ಪರಿಚಯ ಎಲ್ಲವೂ ಸಹನೀಯ ಮತ್ತು ಅನುಕರಣೀಯ.
ಆದರೆ ಅತ್ಯುಪಯುಕ್ತ ಆಹಾರ ಪದಾರ್ಥಗಳ ದುರುಪಯೋಗ ಅಕ್ಷಮ್ಯ. ಪ್ರಜ್ಞಾವಂತ ನಾಗರಿಕರು ಇದಕ್ಕೆ ಒಂದು ಮಿತಿ ಹೇರಲೇಬೇಕಿದೆ.
ಸಿನಿಮಾ ನಟರ ಕಟೌಟುಗಳಿಗೆ ಹಾಲಿನ ಅಭಿಷೇಕ, ಇನ್ಯಾರಿಗೋ ಸೇಬಿನ ಹಾರ, ಸಿನಿಮಾ-ಧಾರವಾಹಿಗಳಲ್ಲಿ ಆಹಾರ ಪದಾರ್ಥಗಳನ್ನು ಚೆಲ್ಲುವ ಅಥವಾ ನಾಶಪಡಿಸುವ ದೃಶ್ಯಗಳು ಎಲ್ಲವನ್ನೂ ನಿಲ್ಲಿಸಬೇಕು. ಅದು ರಾಷ್ಟ್ರೀಯ ಸಂಪನ್ಮೂಲಗಳ ನೇರ ದುರುಪಯೋಗ ಎಂದು ಪರಿಗಣಿಸಬೇಕು.
ಹಾಲೇ ಇರಲಿ, ಹಣ್ಣು, ತರಕಾರಿಗಳೇ ಇರಲಿ, ಬೇಳೆ ಕಾಳುಗಳೇ ಇರಲಿ ರೈತರು ಬಹಳ ಕಷ್ಟಪಟ್ಟು ಪ್ರಕೃತಿಯನ್ನು ಉಪಯೋಗಿಸಿಕೊಂಡು ಬೆಳೆಯುತ್ತಾರೆ. ಅದಕ್ಕೆ ಗೌರವ ಕೊಡಬೇಕಾದದ್ದು ಮತ್ತು ಸದುಪಯೋಗ ಪಡಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ.
ನಾಗರ ಪಂಚಮಿ ಒಂದು ಹಬ್ಬವಾಗಿ ಆಚರಿಸಿ. ಆದರೆ ಹಾವು ಅಥವಾ ಹುತ್ತಕ್ಕೆ ಹಾಲೆರೆಯದೇ ಅದೇ ಹಾಲು ಹಣ್ಣುಗಳನ್ನು ದಯವಿಟ್ಟು ಆಹಾರವಾಗಿ ಉಪಯೋಗಿಸಿಕೊಳ್ಳಿ ಅಥವಾ ಇತರರಿಗೆ ದಾನ ಮಾಡಿ. ಇದರಿಂದ ನಾಗರ ಪಂಚಮಿ ಒಂದು ಹಸಿವು ನಿವಾರಣೆಯ ಹಬ್ಬವಾಗಲಿ.
ಇದನ್ನು ಧಾರ್ಮಿಕ ನಾಯಕರುಗಳು, ಮಾಧ್ಯಮಗಳವರು, ಶಿಕ್ಷಕರು, ವಿಜ್ಞಾನಿಗಳು, ರಾಜಕಾರಣಿಗಳು, ಪ್ರಗತಿಪರರು ಎಲ್ಲರೂ ಹೇಳಬೇಕು.
ಒಂದು ಸಮಾಜದ ನಿಜವಾದ ಆತ್ಮ ಅಡಗಿರುವುದು ಧರ್ಮದಿಂದಲ್ಲ, ವಿಜ್ಞಾನದಿಂದಲ್ಲ ಪ್ರಕೃತಿಯ ಸಹಜ ನಿಯಮದಿಂದ ಮಾತ್ರ. ಅದಕ್ಕಾಗಿ ನಮ್ಮ ನಿಷ್ಠೆ ಪ್ರಕೃತಿಯೆಡೆಗೆ ಇರಲಿ.
-ಸ್ನೇಕ್ ಪ್ರಶಾಂತ್


ಹಾವು ಹಾಲು ಕುಡಿಯುವುದಿಲ್ಲ
ಕಲಬುರಗಿ,ಆ.2-ಹಾವುಗಳು ಹಾಲು ಕುಡಿಯುವುದಿಲ್ಲ, ಹಾಲು ಹಾವುಗಳ ಆಹಾರವೂ ಅಲ್ಲ, ಅದು ಮಾಂಸಾಹಾರಿ ಸರೀಸೃಪ. ಆದರೂ ಸಂಪ್ರದಾಯ, ನಂಬಿಕೆ ಹೆಸರಿನಲ್ಲಿ ನಾಗರ ಪಂಚಮಿ ನೆಪದಲ್ಲಿ ಲಕ್ಷಾಂತರ ಲೀಟರ್ ಹಾಲನ್ನು ಪೆÇೀಲು ಮಾಡಲಾಗುತ್ತಿದೆ. ಜನರಲ್ಲಿ ಬೇರೂರಿರುವ ಮೂಢನಂಬಿಕೆ ಹೋಗಲಾಡಿಸಿ ಈ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ. ನಾಗರ ಪಂಚಮಿ ಹೆಸರಿನಲ್ಲಿ ಹಾಲನ್ನು ಪೆÇೀಲು ಮಾಡುವ ಬದಲು ಬಡ ರೋಗಿಗಳಿಗೆ , ವೃದ್ಧರಿಗೆ , ಅನಾಥ ಮಕ್ಕಳಿಗೆ , ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿ ಅವರ ಬದುಕನ್ನು ಉತ್ತಮಗೊಳಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಪ್ರಶಾಂತ ಪಾಟೀಲ್ ಅವರು.
ನಗರದ ಜೇವರ್ಗಿ ಕಾಲೋನಿ, ಪೂಜಾ ಕಾಲೋನಿ, ರೇವಣಸಿದ್ದೇಶ್ವರ ಕಾಲೋನಿ, ಜಿಡಿಎ ಕಾಲೋನಿ, ಆರ್.ಟಿ.ಓ ಕ್ರಾಸ್, ಸಿದ್ದೇಶ್ವರ ನಗರ, ವಿಶ್ವವಿದ್ಯಾಲಯ, ಲಕ್ಷ್ಮೀ ನಗರ, ಪಿ.ಎನ್.ಟಿ.ಕಾಲೋನಿ, ಶಿವಾಜಿ ನಗರ ಸೇರಿದಂತೆ ನಗರದ ವಿವಿಧೆಡೆ ರಕ್ಷಣೆ ಮಾಡಿದ 16 ಹಾವುಗಳನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟ ನಂತರ “ಸಂಜೆವಾಣಿ”ಜೊತೆ ಮಾತನಾಡಿದ ಅವರು, ” ಹಾವುಗಳು ಹಾಲು ಕುಡಿಯುವುದಿಲ್ಲ. ಅದು ಮಾಂಸಹಾರಿ ಸರಿಸೃಪ. ನಾಗರ ಪಂಚಮಿ ದಿನ ಹುತ್ತಿಗೆ ಹಾಲು ಹಾಕುವುದು, ಅರಿಶಿಣ, ಕುಂಕುಮ ಹಾಕುವುದರಿಂದ ಹಾವಿನ ಜೀವಕ್ಕೆ ಅಪಾಯವಾಗುತ್ತದೆ. ಆದರೆ, ಈ ಸತ್ಯ ಜನರಿಗೆ ತಿಳಿಸುವ ಕೆಲಸವಾಗುತ್ತಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ.
ಕಳೆದ 7 ವರ್ಷಗಳಿಂದ ಹಾವುಗಳ ರಕ್ಷಣೆ ಮಾಡುತ್ತಿರುವ ಪ್ರಶಾಂತ ಅವರು ಇದುವರೆಗೆ ಸುಮಾರು 35 ಹಾವುಗಳನ್ನು ರಕ್ಷಿಸಿದ್ದಾರೆ. ಹಾವುಗಳಲ್ಲಿ ಹಲವಾರು ಜಾತಿಗಳಿದ್ದು, ಅದರಲ್ಲಿ ನಾಗರಹಾವು, ಕೆರೆ ಹಾವು, ಕಟ್ಟಾವು, ಉಲ್ಫಸ್ನೇಕ್, ಗ್ರೀನ್ ಮೆನ್ ಸ್ನೇಕ್, ಗ್ರೀನ್ ಕಿಲ್ ಬ್ಯಾಕ್, ಬ್ಯಾಂಡೆಡ್ ರೈಸರ್, ಹೆಬ್ಬಾವು, ಮಣಮುಕ ಹಾವು, ವಾಟರ್ ಸ್ನೇಕ್ ಪ್ರಮುಖವಾದವು. ಈ ಭಾಗದಲ್ಲಿ (ಕಲ್ಯಾಣ ಕರ್ನಾಟಕ) ಸುಮಾರು 24 ತಳಿಯ ಹಾವುಗಳಿದ್ದು ಅದರಲ್ಲಿ 4 ತಳಿಯ ಹಾವುಗಳು ಮಾತ್ರ ವಿಷಕಾರಿ ಹಾವುಗಳಾಗಿವೆ. ನಾಗರ ಹಾವು, ಮಿಡಿನಾಗರ ಹಾವು ವಿಷಕಾರಿಯಾಗಿದ್ದು, ಇಂತಹ ವಿಷಕಾರಿ ಹಾವು ಕಚ್ಚಿದಾಗ ಕಚ್ಚಿದ ಭಾಗ ಕಪ್ಪಾಗುತ್ತದೆ. ಆದ್ದರಿಂದ ವಿಷಕಾರಿ ಹಾವು ಕಚ್ಚಿದಾಗ ಎರಡು ತಾಸಿನ ಒಳಗೆ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಯಬೇಕು, ಹಾವು ರಕ್ಷಣೆ ಮಾಡುವ ವೇಳೆ ನನಗೂ ಸಹ ಹಲವಾರು ಬಾರಿ ಕಚ್ಚಿವೆ. ಆಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇನೆ ಎಂದು ಪ್ರಶಾಂತ ಹೇಳುತ್ತಾರೆ.
ಹಾವು ಕಂಡರೆ ಕೊಲ್ಲಬೇಡಿ, ಭಯ ಪಡಬೇಡಿ ಉರಗ ತಜ್ಞರಿಗೆ ತಿಳಿಸಿ ಅವರು ಸ್ಥಳಕ್ಕೆ ಬಂದು ರಕ್ಷಣೆ ಮಾಡುತ್ತಾರೆ ಎನ್ನುತ್ತಾರೆ ಪ್ರಶಾಂತ ಅವರು.
ಪ್ರಶಾಂತ ಅವರನ್ನು ಸಂಪರ್ಕಿಸಲು ಮೊಬೈಲ್ ನಂಬರ್ 74114 31430, 74114 31414 ಕರೆ ಮಾಡಬಹುದಾಗಿದೆ.