ಕಲ್ಲೇದೇವರಪುರ ಶ್ರೀ ಕಲ್ಲೇಶ್ವರ ಸ್ವಾಮಿ  ಜಾತ್ರೆಗೆ ಸಕಲ ಸಿದ್ದತೆ ಕೈಗೊಳ್ಳಿ

ಸಂಜೆವಾಣಿ ವಾರ್ತೆ

ಜಗಳೂರು.ಏ.೬ :- ಏಪ್ರಿಲ್ 24 ರಿಂದ 28 ರವರೆಗೆ ಜರುಗಲಿರುವ ತಾಲೂಕಿನ ಕಲ್ಲದೇವರಪುರದ ಕಲ್ಲೇಶ್ವರ ಜಾತ್ರೆಯಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು,ಆರೋಗ್ಯ ಸೇವೆ,ರಸ್ತೆ ಸಂಚಾರ,ವಿದ್ಯುತ್ ಬೀದಿದೀಪ, ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲು ತಹಶೀಲ್ದಾರ್ ಚಂದ್ರಶೇಖರನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲ್ಲೇ ದೇವರಪುರ ಕಲ್ಲೇಶ್ವರ ದೇವಸ್ಥಾನ ಅಭಿವೃದ್ದಿ ಸಮಿತಿ ಹಾಗೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಜಾತ್ರಾ ಸಿದ್ದತಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ತೇರು ಬೀದಿಯಲ್ಲಿ ತಗ್ಗು ಗುಂಡಿಗಳನ್ನು ಮುಚ್ಚಿ,ರಸ್ತೆ ದುರಸ್ಥಿಗೊಳಿಸುವಂತೆ,ಸಂತೆಯಲ್ಲಿನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ,ಔಷಧೋಪಚಾರ,ಭಕ್ತಾದಿಗಳಿಗೆ ಭದ್ರತೆ,ಶುದ್ದ ಕುಡಿಯು ನೀರು ಪೂರೈಕೆ,ದಾಸೋಹ ಸ್ಥಳದಲ್ಲಿ ಸ್ವಚ್ಛತೆ,ಚರಂಡಿ ಸ್ವಚ್ಛತೆ,ಫಾಗಿಂಗ್,ಸುಗಮ ರಸ್ತೆ ಸಂಚಾರ,ಅಂಬ್ಯುಲೆನ್ಸ್,ತುರ್ತುಚಿಕಿತ್ಸೆ,ಆರೋಗ್ಯಸೇವೆ ಗೆ ಸಕಲ ಸಿದ್ದತೆ ಕೈಗೊಳ್ಳಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹಾಗೂ ಪಿಡಿಓ ಗೆ ಸಲಹೆ ನೀಡಿದರು. ಗ್ರಾಮದಲ್ಲಿ ಎರಡು ಶುದ್ದಕುಡಿಯುವ ನೀರಿನ ಘಟಕಳಿವೆ.ನೀರಿನ ಪೂರೈಕೆಗೆ ಬೋರ್ ವೆಲ್ ಗಳ ಅಗತ್ಯವಿದೆ.ತಾತ್ಕಾಲಿಕ ವಾಗಿ ಎರಡು ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಕೆಮಾಡಲಾಗುತ್ತಿದೆ.ಲಕ್ಷಾಂತರ ಭಕ್ತಾದಿಗಳು ಜಾತ್ರೆಗೆ ಆಗಮಿಸುತ್ತಿದ್ದು.ನೀರಿನ ಸಮಸ್ಯೆ ಉಲ್ಬಣವಾಗ ಬಹುದು.ಕೆಲ ಇಲಾಖೆಗೆ ಜವಾಬ್ದಾರಿವಹಿಸಿದರೆ ಸಬೂಬು ಹೇಳಿಸಿಬ್ಬಂದಿಗಳು ನಿರ್ಲಕ್ಷ್ಯವಹಿಸುತ್ತಾರೆ ಆದ್ದರಿಂದ ದೇವಸ್ಥಾನ ಸಮಿತಿಗೆ ಜವಾಬ್ದಾರಿ ಕೊಡಿ ಸಮರ್ಥವಾಗಿ ಖರ್ಚುವೆಚ್ಚ ನಿಭಾಯಿಸುತ್ತೇವೆ ಎಂದು ಸಮಿತಿಯ ಅಧ್ಯಕ್ಷ ಕೆ.ಜಿ.ಶರಣಪ್ಪ,ಪದಾಧಿಕಾರಿಗಳಾದ ವೀರೇಂದ್ರ ನಾಡಿಗರ್,ವೀರಸ್ವಾಮಿ, ಕೊಟ್ಟಿಗೆ ತಿಪ್ಪೇಸ್ವಾಮಿ,ಸಣ್ಣ ಸೂರಜ್ಜ,ಆಕ್ಷೇಪ ವ್ಯಕ್ತಪಡಿಸಿದರು.ಪಿಎಸ್ ಐ ಸಾಗರ್ ಮಾತನಾಡಿ,ಪ್ರತಿವರ್ಷದಂತೆ ಪೊಲೀಸ್ ಇಲಾಖೆಯಿಂದ‌ಬ್ಯಾರಿಕೇಡ್,ಬಿಗಿ ಬಂದೋಬಸ್ತ್ ಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು.ಗ್ರಾಮಸ್ಥರು ಹೆಚ್ಚುವರಿಯಾಗಿ  ಸ್ಥಳೀಯ 25 ಜನ ಸ್ವಯಂಸೇವಕರನ್ನು ನೇಮಿಸಿದರೆ ಕಳ್ಳತನ,ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಅನುಕೂಲವಾಗಲಿದೆ ಎಂದು ಮನವಿಮಾಡಿದರು.ಈ ಸಂದರ್ಭದಲ್ಲಿ ತಾ.ಪಂ ಇಓ ಶ್ರೀಕಂಠ ರಾಜ ಅರಸ್, ದೇವಸ್ಥಾನ ಸಮಿತಿ ಸದಸ್ಯರಾದ ಕಲ್ಲಪ್ಪ,ಶಿವಾನಂದ, ಶಶಿಕುಮಾರ್,ಬೆಸ್ಕಾಂ ಎಇಇ ಸುಧಾಮಣಿ,ಟಿಎಚ್ ಓ ಡಾ.ವಿಶ್ವನಾಥ್,ಎಇಇ ಶಿವಕುಮಾರ್,ಸೇರಿದಂತೆ ಇದ್ದರು.