ಕಲ್ಲೆದೇವಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಜಗಳೂರು.ಏ.೧೯: ತಾಲ್ಲೂಕಿನ ಕಲ್ಲೇದೇವರ ಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.ಈ ವೇಳೆಕೆ.ಪಿ.ಸಿ.ಸಿ ಎಸ್ಟಿ ಘಟಕದ ರಾಜ್ಯಾದ್ಯಾಕ್ಷ ಕೆ ಪಿ. ಪಾಲಯ್ಯ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಕಾರ್ಯಕ್ರಮದ ಉದ್ದೇಶಿಸಿ ಭಾರತದ ವ್ಯವಸ್ಥೆಯಲ್ಲಿ ಜಾತಿ ಧರ್ಮ ಆಧಾರದ ಮೇಲೆ ನಿಂತಿರುವಂತೆ ವ್ಯವಸ್ಥೆಯಲ್ಲಿ ಮೇಲು-ಕೀಳು ಎಂಬ ಮನೋಭಾವನೆಯನ್ನು ದೇಶದಲ್ಲಿ ಅಡಗಿಕೊಂಡಿದ್ದು ಇದನ್ನು ಜಾತಿವ್ಯವಸ್ಥೆಯನ್ನು ಹೋಗಲಾಡಿಸುವಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಪಾತ್ರ ದೊಡ್ಡದಾಗಿದೆ ಆದ್ದರಿಂದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಒಂದೇ ಎಂಬ ಮನೋ ಭಾವನೆಯಿಂದ ಬಾಳಬೇಕು.  ಮಹಿಳೆಯರಿಗೆ ವಿಶೇಷವಾದಂತಹ ಸ್ಥಾನಮಾನವನ್ನು ನೀಡಿದ್ದಾರೆ ಆದ್ದರಿಂದ ಅಂಬೇಡ್ಕರವರ 
130ನೇ ಜಯಂತೋತ್ಸವವನ್ನು ನಾವೆಲ್ಲರೂ ಸೇರಿ ಆಚರಣೆ ಮಾಡಬೇಕೆಂದು ತಿಳಿಸಿದರುನಂತರ ಕಲ್ಲೆದೇವರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ  ವಸಂತಕುಮಾರಿ ತಿಪ್ಪೇಸ್ವಾಮಿ ಮಾತನಾಡಿ ಮಹಿಳಾ ಮೀಸಲಾತಿ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದು ಅಂಬೇಡ್ಕರ್ ಕೊಡುಗೆ ಅಪಾರವಾದದ್ದು ಅಂಬೇಡ್ಕರ್ ಅವರನ್ನು ಒಂದೇ ಜಾತಿಗೆ ಸೀಮಿತಗೊಳಿಸದೆ ಎಲ್ಲ ಸಮುದಾಯದವರು ಅಂಬೇಡ್ಕರ್ ಅವರನ್ನು ಗೌರವಿಸಬೇಕು ಮತ್ತು ಅವರು ಬರೆದುಕೊಟ್ಟ ಸಂವಿಧಾನದಡಿಯಲ್ಲಿ ಸಮಾನವಾಗಿ ಬಾಳಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಕಲ್ಲೆದೇವರಪುರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಮ್ಮ , ಮಹೇಶ್ ಸದಸ್ಯರಾದ ಶ್ರೀಮತಿ ಶೃತಿ, ಶ್ರೀಮತಿ ವಿಶಾಲಕ್ಷಮ್ಮ  ಗ್ರಾಮದ ಮುಖಂಡರು, ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು