ಕಲ್ಲೂರು ವಿವಿಧ ದೇವಸ್ಥಾನಗಳಿಗೆ ಮಾಜಿ ಶಾಸಕರು ಭೇಟಿ

ಸಿರವಾರ.ಜ೧೮- ಸಂಕ್ರಾಂತಿ ಹಬ್ಬದ ಅಂಗವಾಗಿ ಮಾಜಿ ಶಾಸಕರು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಹಾಗೂ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ವಿವಿಧ ದೇವಸ್ಥಾನಕ್ಕ ಬೇಟಿ ನೀಡಿ ದರ್ಶನ ಪಡೆದರು.
ತಾಲೂಕಿನ ಕಲ್ಲೂರು ಗ್ರಾಮದ ಶ್ರೀ ಮಾರಟೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಮಾರಟೇಶ್ವರನ ದರ್ಶನ ಪಡೆದರು, ಹಾಗೂ ಶ್ರೀ ಲಕ್ಷ್ಮೀ ದೇವಿಯ ದರ್ಶನ ಪಡೆದರು. ದೇವಸ್ಥಾನದಿಂದ ಎನ್.ಎಸ್.ಬೋಸರಾಜು ಹಾಗೂ ಜಿ.ಹಂಪಯ್ಯನಾಯಕ ಅವರಿಗೆ ಸನ್ಮಾನಿಸಲಾಯಿತು.