ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರ್.ವಿ.ಎನ್.

ಸಿರವಾರ.ಜೂ.೩-ತಾಲೂಕಿನ ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಬೆಳಗ್ಗೆ ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಪರಿಶೀಲಿಸಿ ನಂತರ ಡಿಎಚ್‌ಒ ಜೊತೆ ಫೋನ್ ಮುಖಾಂತರ ಮಾತನಾಡಿ ಆದಷ್ಟು ಬೇಗ ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಡ್ಡಿನ ವ್ಯವಸ್ಥೆ, ಆಕ್ಸೀಜನ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಂತಹ ಸಾರ್ವಜನಿಕರಿಗೆ, ರೋಗಿಗಳಿಗೆ ಮಾಸ್ಕ್ ದರಿಸುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಪಾಡುವುದು, ಬಹಳ ಮುಖ್ಯವಾಗಿದೆ. ಆದ್ದರಿಂದ ಬರುವಂತಹ ರೋಗಿಗಳಿಗೆ ಸ್ಪಂದನೆ ನೀಡಿ ಅವರಿಗೆ ಚಿಕಿತ್ಸೆ ಕೊಡಬೇಕೆಂದು ವೈದ್ಯರಿಗೆ ಕಡಕ್ಕಾಗಿ ಸೂಚನೆ ನೀಡಿದರು.
ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ, ತಾ. ಪಂಚಾಯತ ಸದಸ್ಯ ಪಕೀರಪ್ಪ ಕಲ್ಲೂರು, ತಾಯಪ್ಪ ಹೊಸೂರು, ಭೀಮರಾಯ, ಹಂಪನಗೌಡ ನೀರಮಾನವಿ, ಎಮ್ ಡಿ ಇಸ್ಮಾಯಿಲ್,ಗೋಪಾಲ ನಾಯಕ ಹರವಿ, ಮೌಲ ಸಾಬ್, ಶರಣಪ್ಪ ಗೌಡ ಮದ್ಲಾಪೂರ, ಯಲಪ್ಪ ನಾಯಕ ಮಾನವಿ ಇನ್ನಿತರರು ಇದ್ದರು.