ಕಲ್ಲೂರು ಗ್ರಾಮದ ಯುವಕ ಐಎಎಸ್ ಗೆ ಸೆಲೆಕ್ಟ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.24: ರಾಯಾಚೂರು ಜಿಲ್ಲೆ ಸಿರಿವಾರ ತಾಲ್ಲೂಕು ಕಲ್ಲೂರು ಗ್ರಾಮದ ಶ್ರೀ ರಾಘವೇಂದ್ರ ರಾವ್ ಪೂಜಾರಿ  ಇವರ ಪುತ್ರ ಪಿ. ಶ್ರವಣ್ ಕುಮಾರ್ ಈತನು ಕೇಂದ್ರ ಸರ್ಕಾರದ ಯೂನಿಯನ್ ಪಬ್ಲಿಕ್ ಸರ್ವಿಸಸ್ ಕಮಿಷನ್ ಇವರು ನಡೆಸಿದ ಪರೀಕ್ಷೆಯಲ್ಲಿ 222ನೇ ರ್‍ಯಾಂಕ್ ಪಡೆದುಕೊಂಡು ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸಸ್( ಐಎಎಸ್ ) ಗೆ ಸೆಲೆಕ್ಟ್ ಆಗಿದ್ದಾರೆ.
ಕಳೆದ ವರ್ಷ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ ಶ್ರವಣ್ ಕುಮಾರ್  ಇಂಡಿಯನ್ ರೆವಿನ್ಯೂ ಸರ್ವಿಸಸ್ ಸೆಲೆಕ್ಟ್ ಆಗಿ ತರಬೇತಿಯನ್ನು ಪಡೆಯುತ್ತಿದ್ದಾನೆ.
 1995 ರಲ್ಲಿ ಜನಿಸಿದ ಶ್ರವಣ್ ಕುಮಾರ್ ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನಂಬರ್.
ವಿಶಾಖಪಟ್ಟಣಂ, ಕುದುರೆಮುಖ,  ಆರ್ಕೋನಮ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನುಮುಗಿಸಿ,  ಹೈಸ್ಕೂಲ್ ಅನ್ನು ಒರಿಸ್ಸಾ ರಾಜ್ಯದ ಕಾನೀಯದಲ್ಲಿ ಮುಗಿಸಿದನಂಬರ್.
ಪಿಯುಸಿ ಒಂದು ಮತ್ತು ಎರಡನ್ನು ಹೈದರಾಬಾದಿನಲ್ಲಿ ಮುಗಿಸಿದ ಈತನು ಬಿ ಟೆಕ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಅದ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಿಂದ ಡಿಗ್ರಿ ಪಡೆದರು.
ಡಿಗ್ರಿ ಅಭ್ಯಾಸ ಮಾಡುವಾಗಲೇ ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಹೊಂದಿದ್ದ ಶ್ರವಣ್ ಕುಮಾರ್, ಪರೀಕ್ಷೆ ಮುಗಿಯುತ್ತದೆ ಯುಪಿಎಸ್ ಪರೀಕ್ಷೆಗೆ ಅಟೆಂಡ್ ಆದರೂ ಮೊದಲನೇ ಎರಡು ಅಟ್ಟೆಂಪ್ಟ್ ಗಳಲ್ಲಿ ಯಶಸ್ವಿಯಾಗಲಿಲ್ಲ.
ದೃತಿಗೆಡದ  ಶ್ರವಣ್ ಕುಮಾರ್ ಮೂರನೆಯ ಪ್ರಯತ್ನ ದಲ್ಲಿ ಐ ಆರ್ ಎಸ್ ಗೆ ಸೆಲೆಕ್ಟ್ ಆದರು.
ಶ್ರೀ ರಾಘವೇಂದ್ರ ಪೂಜಾರಿಯವರು ಕಳೆದ ಎರಡು ದಶಕಗಳಿಂದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ದಲ್ಲಿ ಕೆಲಸ ಮಾಡುತ್ತಿದ್ದು ದೇಶದ ವಿವಿಧಡೆ ಸೇವೆ  ಸಲ್ಲಿಸಿದ್ದಾರೆ. ಈಗ ಅವರು ಹೈದರಾಬಾದಿನ  ಭಾರತ ಡೈನಮಿಕ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರೀ ಶವನ್ ಕುಮಾರ್ ಇವರ ಸಾಧನೆಗೆ  ಕಲ್ಲೂರಿನ ಹಲವಾರು ಗಣ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.